ಬೀಳಗಿ ತಾಲೂಕಿನ ಅಮಲಝರಿ ಗ್ರಾಮದಲ್ಲಿ ನಡೆದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಪ್ರಚಾರ ಸಭೆಯಲ್ಲಿ ಜೈನಾಪುರ ಕುಮಾರ ದೇಸಾಯಿ ಅವರ ಪೆನಲ್ ಪರವಾಗಿ ಶಾಸಕ ಜೆ.ಟಿ.ಪಾಟೀಲ ಮತಯಾಚಿಸಿ ಮಾತನಾಡಿದರು. ಮಲ್ಲಪ್ಪ ಕಾಳಗಿ, ಎಂ.ಎಲ್.ಕೆಂಪಲಿಂಗನ್ನವರ, ಜೆ.ಡಿ.ದೇಸಾಯಿ ಇದ್ದರು. 
ಜಿಲ್ಲೆ

ಕಾರ್ಖಾನೆ ಉಳಿಸುವುದು ರೈತರ ಜವಾಬ್ದಾರಿ

ಬೀಳಗಿ: ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅವಳಿ ಜಿಲ್ಲೆಯ ರೈತಾಪಿ ಜನರ ಜೀವನಾಡಿಯಾಗಿದೆ. ಕಾರ್ಖಾನೆ ಉಳಿಸಿ ಬೆಳೆಸುವುದು ಕಬ್ಬು ಬೆಳೆಗಾರರ, ಷೇರುದಾರರ ಜವಾಬ್ದಾರಿಯಾಗಿದೆ. ಸೆ.1 ರಂದು ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ ನಡೆಯಲಿದ್ದು, ಜೈನಾಪುರದ ಕುಮಾರ ದೇಸಾಯಿ ಅವರ ಪೆನಲ್‌ಗೆ ಬೆಂಬಲ ನೀಡುವಂತೆ ಶಾಸಕ ಜೆ.ಟಿ.ಪಾಟೀಲ ಮನವಿ ಮಾಡಿದರು.

ತಾಲೂಕಿನ ಅಮಲಝರಿ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ರೈತರು ಯೋಚನೆ ಮಾಡಬೇಕು. ಹಾಲಿ ಆಡಳಿತ ಮಂಡಳಿಯವರು ಕಾರ್ಖಾನೆ ಅಭಿವೃದ್ಧಿಗೆ ಶ್ರಮಿಸಿಲ್ಲ. ಈ ಚುನಾವಣೆ ಹಣ ಮುಕ್ತ ಚುನಾವಣೆಯಾಗಿದೆ. ಕಾರ್ಖಾನೆಗೆ ಉತ್ತಮ ಆಡಳಿತ ನೀಡುವ ನಿರ್ದೇಶಕರು ಆಯ್ಕೆಯಾದರೆ ಮಾತ್ರ ಉಳಿಯಲು ಸಾಧ್ಯ. ಕಾರ್ಖಾನೆ ಅಭಿವೃದ್ಧಿಗೆ ಅವಳಿ ಜಿಲ್ಲೆಯ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಮತ್ತು ಆರ್.ಬಿ.ತಿಮ್ಮಾಪುರ ಮತ್ತು ನಮ್ಮ ಪಕ್ಷದ ಶಾಸಕರು ಸಹಕಾರ ನೀಡಲಿದ್ದಾರೆ. ಮತದಾರರು ಒಂದೇ ಪೆನಲ್‌ಗೆ ಬೆಂಬಲ ನೀಡಬೇಕು ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಪ್ಪ ಕಾಳಗಿ, ಜಿಪಂ ಮಾಜಿ ಅಧ್ಯಕ್ಷ ಎಂ.ಎಲ್.ಕೆಂಪಲಿಂಗನ್ನವರ, ಜೆ.ಡಿ.ದೇಸಾಯಿ, ಎಸ್.ಟಿ.ಪಾಟೀಲ, ಗೌಡಪ್ಪ ಪಾಟೀಲ, ಪಪಂ ಸದಸ್ಯ ಪಡಿಯಪ್ಪ ಕರಿಗಾರ ಇದ್ದರು.