ಎನ್.ಆರ್.ಪುರ ತಾಲೂಕಿನ ವಿವಿಧ ಶಾಲೆಗಳಿಂದ ವರ್ಗಾವಣೆಗೊಂಡ ಶಿಕ್ಷಕರನ್ನು ಬಾಳೆಹೊನ್ನೂರಿನ ಸೀನಿಯರ್ ಚೇಂಬರ್ ಸಂಸ್ಥೆಯಿಂದ ಗೌರವಿಸಲಾಯಿತು. ಬಿಇಒ ಕೆ.ಆರ್.ಪುಷ್ಪಾ, ಡಿ.ರಾಜೇಂದ್ರ, ಕೆ.ಎಂ.ರಾಘವೇಂದ್ರ, ಅಶೋಕ್, ಯು.ಸಿ.ಪ್ರದೀಪ್, ನಂಜುಂಡಪ್ಪ ಇತರರಿದ್ದರು. 
ಜಿಲ್ಲೆ

ಶಿಕ್ಷಕರ ಮೇಲಿದೆ ಸಚ್ಛಾರಿತ್ರ್ಯ ಬೆಳೆಸುವ ಜವಾಬ್ದಾರಿ

ಎಸ್.ಎನ್.ರವೀಂದ್ರ

ಬಾಳೆಹೊನ್ನೂರು: ವಿದ್ಯಾರ್ಥಿಗಳಲ್ಲಿ ಸಚ್ಛಾರಿತ್ರ್ಯ ಬೆಳೆಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಎನ್.ಆರ್.ಪುರ ಬಿಇಒ ಕೆ.ಆರ್.ಪುಷ್ಪಾ ಹೇಳಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ಗಡಿಗೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಶಿಕ್ಷಕರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಯಾಗಿ ರೂಪುಗೊಳಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುವುದು ಗುರುವಿನ ಉದ್ದೇಶ. ಶಿಕ್ಷಕರಲ್ಲಿರುವ ಕ್ರೀಡೆ, ಸಾಹಿತ್ಯ, ಗಾಯನ ಪ್ರತಿಭೆಯನ್ನು ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡುತ್ತಾರೆ ಎಂದರು.
ರಾಜ್ಯ ಬಡ್ತಿ ಮುಖ್ಯಶಿಕ್ಷಕರ ಸಂಘದ ಉಪಾಧ್ಯಕ್ಷ ಅಶೋಕ್ ಮಾತನಾಡಿ, ಶಿಕ್ಷಕರ ಮಾನಸಿಕ ಉಲ್ಲಾಸಕ್ಕಾಗಿ ಸೀನಿಯರ್ ಚೇಂಬರ್ ಸಂಸ್ಥೆಯು ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿದೆ ಎಂದರು.
ಸೀನಿಯರ್ ಚೇಂಬರ್ ಅಧ್ಯಕ್ಷ ಡಿ.ರಾಜೇಂದ್ರ ಕೆಸವಿನಮನೆ ಮಾತನಾಡಿ, ಸಮಾಜಕ್ಕೆ ಶಿಕ್ಷಣ ನೀಡುತ್ತಿರುವ ಶಿಕ್ಷಕರಿಗೆ ಗೌರವ ನೀಡಬೇಕಾಗಿರುವುದು ಎಲ್ಲರ ಆದ್ಯ ಕರ್ತವ್ಯ. ವಿದ್ಯಾರ್ಥಿ ಉನ್ನತ ಸ್ಥಾನಮಾನ ಗಳಿಸಿದಾಗ ಶಿಕ್ಷಕ ಸಂತೋಷಪಡುವಷ್ಟು ಬೇರಾರೂ ಖುಷಿ ಪಡುವುದಿಲ್ಲ ಎಂದು ಹೇಳಿದರು.
ಎನ್.ಆರ್.ಪುರ ತಾಲೂಕಿನಿಂದ ವರ್ಗಾವಣೆಗೊಂಡ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರನ್ನು ಗೌರವಿಸಲಾಯಿತು. ಶಿಕ್ಷಕರಿಗೆ ವಾಲಿಬಾಲ್, ಥ್ರೋಬಾಲ್ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಿ ಬಹುಮಾನ ನೀಡಲಾಯಿತು.
ಆಡುವಳ್ಳಿ ಗ್ರಾಪಂ ಅಧ್ಯಕ್ಷ ಯು.ಸಿ.ಪ್ರದೀಪ್, ದಾನಿಗಳಾದ ಎಂ.ಎನ್.ರಮೇಶ್, ಎಂ.ಎನ್.ಸುಧಾಕರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ರಾಘವೇಂದ್ರ, ಎಸ್‌ಡಿಎಂಸಿ ಅಧ್ಯಕ್ಷ ಕೆ.ಎನ್.ಶಿವೇಂದ್ರ, ಮುಖ್ಯಶಿಕ್ಷಕ ಡಿ.ಎನ್.ಮಂಜುನಾಥ್, ಪ್ರಮುಖರಾದ ಚೈತನ್ಯ ವೆಂಕಿ, ಸೋಮೇಶ್‌ಗೌಡ, ಎಚ್.ಎನ್.ವಿಶ್ವನಾಥ್, ನಂಜುಂಡಪ್ಪ, ಬಿ.ಬಿ.ವಿಜಯ್, ಕಟ್ಟೇಗೌಡ, ಎಚ್.ಗೋಪಾಲ್, ಸತೀಶ್ ಅರಳೀಕೊಪ್ಪ, ವೆಂಕಟೇಶ್‌ಭಟ್, ರಂಗಪ್ಪ, ಸುಭಾಶ್ ಇತರರಿದ್ದರು.