ಮಸ್ಕಿ: ದೇಶಕ್ಕೆ ರೈತರು, ನ್ಯಾಯಾಂಗಕ್ಕೆ ವಕೀಲರೇ ಬೆನ್ನೆಲುಬು ಎನ್ನುವುದನ್ನು ಮರೆಯಬಾರದು. ಕಿರಿಯ ವಕೀಲರು ಶ್ರದ್ಧೆಯಿಂದ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು ಎಂದು ನ್ಯಾಯಾಧೀಶ ಅಚ್ಚಪ್ಪ ದೊಡ್ಡಬಸವರಾಜ ಹೇಳಿದರು.
ಇದನ್ನೂ ಓದಿ:ಶಾಲಿನಿ ಶೆಟ್ಟಿ ಬೀಳ್ಕೊಡುಗೆ ಕಾರ್ಯಕ್ರಮ
ಪಟ್ಟಣದ ಜೆಎಂಎಫ್ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಸ್ಕಿಯಲ್ಲಿ ಹೊಸ ನ್ಯಾಯಾಲಯ ಆರಂಭವಾದಾಗಿನಿಂದ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಸುಯೋಗ. ವಕೀಲರು ಅಧ್ಯಯನಶೀಲರಾದರೆ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದರು. ನ್ಯಾಯಾಧೀಶ ಅಚ್ಚಪ್ಪ ದೊಡ್ಡಬಸವರಾಜ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ರಾಮಣ್ಣ ನಾಯಕ, ಹಿರಿಯ ವಕೀಲರಾದ ಚನ್ನಪ್ಪ ಹರಸೂರು, ಈಶಪ್ಪ ದೇಸಾಯಿ, ಅಮರೇಗೌಡ ತಿಮ್ಮಾಪುರ, ಆನಂದ ರಾಠೋಡ, ನಿರುಪಾದೆಪ್ಪ ವಕೀಲ, ಪ್ರಮುಖರಾದ ಎಸ್.ಎಸ್.ಕುಲಕರ್ಣಿ, ವೆಂಕೋಬ ದೇಸಾಯಿ, ಕೆ.ಅಮರೇಗೌಡ, ದುರುಗೇಶ ಕ್ಯಾತ್ನಟ್ಟಿ, ಮಲ್ಲಪ್ಪ ನಾಗರಬೇಂಚಿ ಇತರರಿದ್ದರು.