ಜಿಲ್ಲೆ

ರೈಲ್ವೆ ಇಲಾಖೆಯಲ್ಲಿ ನಿವೃತ್ತ ಯೋಧರನ್ನು ಕೈಬಿಡುವುದು ಸರಿಯಲ್ಲ

ಹುಬ್ಬಳ್ಳಿ: ನಿವೃತ್ತ ಸೈನಿಕರನ್ನು 15 ವರ್ಷಗಳ ಹಿಂದೆ ರೈಲ್ವೆ ಇಲಾಖೆಯಲ್ಲಿ ನೇಮಕ ಮಾಡಿಕೊಂಡು ಈಗ ಕೈಬಿಡುತ್ತಿರುವುದು ಸರಿಯಲ್ಲ. ಇದು ಹೀಗೆ ಮುಂದುವರಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಕ್ಸ್ ಸರ್ವಿಸ್​ವುನ್ ಜಿಎಂ ಎಸ್​ಡಬ್ಲ್ಯುಆರ್ ಅಸೋಸಿಯೇಷನ್ ಅಧ್ಯಕ್ಷ ನಿಂಗಪ್ಪ ಕಾಮೋಜಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 300ಕ್ಕೂ ಹೆಚ್ಚು ನಿವೃತ್ತ ಸೈನಿಕರು ರೈಲ್ವೆಯಲ್ಲಿ ಗೇಟ್​ವುನ್​ಗಳಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ಪ್ರತಿ ವರ್ಷ ರಿನಿವಲ್ ಮಾಡಲಾಗುತ್ತಿತ್ತು. ಈವರ್ಷ ಕೈ ಬಿಡಲಾಗಿದೆ. ಏಜೆನ್ಸಿ ಮೂಲಕ ಬೇರೆಯವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ನಾವು ಜೀವನ ನಡೆಸುವುದು ಕಷ್ಟವಾಗಿದೆ ಎಂದು ದೂರಿದರು.

ಈಗಾಗಲೇ ಕೇಂದ್ರ ರೈಲ್ವೆ ಮಂತ್ರಿ ಅಶ್ವಿನ್​ಕುಮಾರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮುಂದೆ ನಮ್ಮ ಸಮಸ್ಯೆ ಹೇಳಿದ್ದೇವೆ. ಬರೀ ಭರವಸೆ ನೀಡಿದ್ದಾರೆ. ಇದುವರೆಗೆ ಈಡೇರಿಸಿಲ್ಲ. ಶೀಘ್ರವೇ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟದ ಹಾದಿ ತುಳಿಯುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಪದಾಧಿಕಾರಿಗಳಾದ ಅಲ್ಲಾಭಕ್ಷ ಮುಲ್ಲಾ, ಹುಸೇನ್​ಸಾಬ್ ಹವಾಲ್ದಾರ, ಉಮೇಶ ಬೋಸ್ಲೆ, ಸಂಜೀವ ಸಾವೋಜಿ, ಫಕೀರಪ್ಪ ಪಾಟೀಲ, ಮಹಾಂತೇಶ ಗೌಡ ಇತರರು ಸುದ್ದಿಗೋಷ್ಠಿಯಲ್ಲಿದ್ದರು.