ವಿಜಯಪುರದ ಅಖಿಲ ಭಾರತ ವೀರಶೈವ ಲಿಂಗಾಯತ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ರೋಟರಿ ಪ್ರೊಬಸ್​ ಕ್ಲಬ್​ ಕಾರ್ಯಕ್ರಮದಲ್ಲಿ ಡಾ. ಎಚ್​.ಟಿ. ಲತಾದೇವಿ ಮಾತನಾಡಿದರು. ಶಾರದಾ ಐಹೊಳ್ಳಿ, ಸುವರ್ಣಾ ತೇಲಿ ಮತ್ತಿತರರಿದ್ದಾರೆ. 
ಜಿಲ್ಲೆ

ವಯಸ್ಸಾದಂತೆ ಅಶಕ್ತತೆ ಕಾಣುವುದು ಸಹಜ

ಗಿರೀಶ ಸಗರ

ವಿಜಯಪುರ: ವಯಸ್ಸಾಗಿರುವುದನ್ನು ಮರೆತು ಮೊದಲಿನ ಹಾಗೆ ಕೆಲಸ ಮಾಡಲು ಹೋಗಿ ಶೇ.50 ರಷ್ಟು ಜನ ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ ಎಂದು ಬಿ.ಎಂ. ಪಾಟೀಲ ವೈದ್ಯಕಿಯ ಕಾಲೇಜಿನ ಇಎನ್​ಟಿ ವಿಭಾಗದ ಮುಖ್ಯಸ್ಥೆ ಡಾ. ಎಚ್​.ಟಿ. ಲತಾದೇವಿ ಹೇಳಿದರು.

ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರೋಟರಿ ಪ್ರೊಬಸ್​ ಕ್ಲಬ್​ ವಿಜಯಪುರ (ಉತ್ತರ) ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ವಯಸ್ಸಾದಂತೆ ಕಣ್ಣಿಗೆ ಚಕ್ರ ಬರುವುದು, ಕಿವಿಯಲ್ಲಿ ಏನೋ ಒಂದು ರೀತಿಯ ಸಪ್ಪಳ ಬರುವುದು ಮತ್ತು ಅಶಕ್ತತೆ ಕಾಣುವುದು ಸಹಜ. ಹಿಯರಿಂಗ್​ ಎಡ್​ ಹಾಕುವುದು ಅಸಹ್ಯ ಎನಿಸಬಹುದು ಮತ್ತು ಇದೇನು ಕಿರಿಕಿರಿ ಎನ್ನಬಹುದು. ಆದರೆ, ಅವುಗಳ ರ್ನಿಲಕ್ಷದಿಂದ ಅನಾಹುತಕ್ಕೆ ಒಳಗಾಗಿ ಕುಟುಂಬಕ್ಕೆ ಹೊರೆಯಾಗುವಂತಾಗುತ್ತದೆ ಎಂದರು.

ಶಾರದಾ ಐಹೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪಲ್ಲವಿ ವಚನ ಗಾಯನ ಮಾಡಿದರು. ಡಾ. ವಿ.ಡಿ.ಐಹೊಳ್ಳಿ ಸ್ವಾಗತಿಸಿ ಪರಿಚಯಿಸಿದರು. ಸುವರ್ಣಾ ತೇಲಿ ವಂದಿಸಿದರು.

ಎಸ್​.ಜಿ. ನಾಡಗೌಡ, ವಿ.ಸಿ. ನಾಗಠಾಣ, ಎಂ.ಜಿ. ಯಾದವಾಡ, ಎಸ್​. ಕುಮಾರ, ವಿವೇಕ ಬೀಳಗಿ, ಚಂದ್ರಶೇಖರ ಮೋಟಗಿ, ವಿಠಲ ತೇಲಿ, ರಮೇಶ ತೇಲಿ, ಸುಭಾಸ ಬೇಟಗೇರಿ, ಶಕುಂತಲಾ ಡೊಮನಾಳ, ದೊಡ್ಡಣ್ಣ ಬಜಂತ್ರಿ, ಡಾ. ಕವಿತಾ ದೊಡಮನಿ, ನೂತನ ಬ್ಯಾಕೋಡ, ರೇಖಾ ಹಾದಿಮನಿ, ಎಸ್​.ಬಿ. ದೊಡಮನಿ, ಬಿ.ಕೆ. ಗೋಟ್ಯಾಳ, ಎಸ್​.ಎಚ್​. ಕಸಬೇಗೌಡ ಮತ್ತಿತರರಿದ್ದರು.