ಜಿಲ್ಲೆ

ಗ್ಲಾಕೋಮಾದಿಂದ ರಕ್ಷಣೆ ಪಡೆಯುವುದು ಅಗತ್ಯ

ಪ್ರಶಾಂತ ಹೂಗಾರ

ಕಾಗವಾಡ: ಗ್ಲಾಕೋಮಾ ನಮಗೆ ಗೊತ್ತಾಗದ ಹಾಗೆ ಕುರುಡರನ್ನಾಗಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಂಡು, ಗ್ಲಾಕೋಮಾದಿಂದ ರಕ್ಷಿಸಿಕೊಳ್ಳಬಹುದು ಎಂದು ಮಿರಜ್‌ನ ಶಾಂತಿ ಸರೋಜ ನೇತ್ರಾಲಯದ ಡಾ. ಪೂಜಾ ಭೋಮಾಜ್ ಹೇಳಿದರು.

ಮಹಾರಾಷ್ಟ್ರದ ಮಿರಜ್ ಪಟ್ಟಣದ ಶಾಂತಿ ಸರೋಜ ನೇತ್ರಾಲಯದ ವತಿಯಿಂದ ಈಚೆಗೆ ವಿಶ್ವ ಗ್ಲಾಕೋಮಾ ಸಪ್ತಾಹದ ನಿಮಿತ್ತ ಗ್ಲುಕೋಮಾ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಮಿನಿ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಇದ್ರಸ್‌ಭಾಯಿ ನಾಯಕವಾಡಿ ಮಾತನಾಡಿ, ಶಾಂತಿ ಸರೋಜ ನೇತ್ರಾಲಯದ ಸಾಮಾಜಿಕ ಮತ್ತು ಆರೋಗ್ಯ ಕಾಳಜಿ ಶ್ಲಾಘನೀಯವಾಗಿದೆ ಎಂದರು.

ನೇತ್ರಾಯಲದ ನೇತ್ರತಜ್ಞ ಡಾ. ಶರದ ಭೋಮಾಜ್ ಪ್ರಾಸ್ತಾವಿಕ ಮಾತನಾಡಿ, ಕುಟುಂಬದ ಸದಸ್ಯರಲ್ಲಿ ಗ್ಲಾಕೋಮಾ ಹಿನ್ನಲೆಯಿದ್ದವರು. 40 ವರ್ಷಕ್ಕಿಂತ ಮೇಲ್ಪಟ್ಟವರು. ಮಧುಮೇಹ ಇರುವವರು. ದೀರ್ಘಕಾಲದಿಂದ ಸ್ಟೀರಾಯ್ಡಬಳಸಿದವರು ಮತ್ತು ಕಣ್ಣುಗಳಿಗೆ ಗಾಯ ಮಾಡಿಕೊಂಡವರು ಕಣ್ಣುಗಳ ತಪಾಸಣೆ ಮಾಡಿಸಿಕೊಂಡು, ಗ್ಲಾಕೋಮಾದಿಂದ ರಕ್ಷಿಸಿಕೊಳ್ಳಬೇಕೆಂದು ಎಂದರು.

ಹೃದ್ರೋಗ ತಜ್ಞ ಡಾ. ರಿಯಾಜ್ ಮುಜಾವರ್ ಉಪಸ್ಥಿತರಿದ್ದರು. ಮ್ಯಾರಥಾನ್‌ನಲ್ಲಿ 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.