ಹುನಗುಂದ ವಿ.ಮ. ವೃತ್ತದಲ್ಲಿ ಹೆಲ್ಮೆಟ್ ಧರಿಸಿದ ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ಪಿಎಸ್‌ಐ ಚನ್ನಯ್ಯ ದೇವೂರ ಜಾಗೃತಿ ಮೂಡಿಸಿದರು. ಪೊಲೀಸ್ ಪೇದೆಗಳಾದ ಸಿದ್ದು ಕವಲಿ, ಎಸ್.ವೈ. ಇಟಗಿ, ಪಿ.ಟಿ. ಪವಾರ, ಎನ್.ಬಿ. ಹುನಗುಂದ, ಬಿ.ಎಸ್. ಹಿರೇಮಠ, ಎಸ್.ವೈ. ತಳವಾರ, ಲಕ್ಷ್ಮಣ ಅಂಬಿಗೇರ ಇತರರಿದ್ದರು. 
ಜಿಲ್ಲೆ

ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಿ

ಹುನಗುಂದ: ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಓಡಾಟ ಮಾಡಬೇಕೆಂದು ಪಿಎಸ್‌ಐ ಚನ್ನಯ್ಯ ದೇವೂರ ಹೇಳಿದರು.
ಪಟ್ಟಣದ ವಿಮ ವೃತ್ತದಲ್ಲಿ ಗುರುವಾರ ಸಂಜೆ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮದಲ್ಲಿ ಹೆಲ್ಮೆಟ್ ಧರಿಸಿದ ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ಅವರು ಮಾತನಾಡಿದರು.

ವಾಹನ ಸವಾರರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸಬೇಕು. ನಿಮ್ಮ ಜೀವವನ್ನು ನೀವೇ ರಕ್ಷಣೆ ಮಾಡಿಕೊಳ್ಳಬೇಕು. ಕಳೆದ ತಿಂಗಳಿಂದ ಹೆಲ್ಮೆಟ್ ಇಲ್ಲದೆಯೇ ಹಲವು ಸಾವು-ನೋವು ಸಂಭವಿಸಿವೆ. ಈ ಬಗ್ಗೆ ಜಾಗೃತರಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ತಿಳಿಸಿದರು.

ಪೋಲೀಸ್ ಪೇದೆಗಳಾದ ಸಿದ್ದು ಕವಲಿ, ಎಸ್.ವೈ. ಇಟಗಿ, ಪಿ.ಟಿ. ಪವಾರ, ಎನ್.ಬಿ. ಹುನಗುಂದ, ಬಿ.ಎಸ್. ಹಿರೇಮಠ, ಎಸ್.ವೈ. ತಳವಾರ, ಲಕ್ಷ್ಮಣ ಅಂಬಿಗೇರ ಇತರರಿದ್ದರು.