ಜಿಲ್ಲೆ

ಜ್ಞಾನದಾತರ ಋಣ ಮುಟ್ಟಿಸಲು ಅಸಾಧ್ಯ

ಗಿರೀಶ ಸಗರ

ಬಸವನಬಾಗೇವಾಡಿ: ಶಿಕರು ಜಾತಿ, ಧರ್ಮ, ಬೇಧ, ಭಾವ ಮರೆತು ಮಕ್ಕಳಿಗೆ ಜ್ಞಾನದ ಬೀಜ ಬಿತ್ತುವ ಕಾರ್ಯಮಾಡುತ್ತಾರೆ. ನಾವು ಎಷ್ಟೇ ಜನ್ಮವೆತ್ತಿದರು ಕೂಡಾ ಅವರ ಋಣ ಮುಟ್ಟಿಸಲು ಅಸಾಧ್ಯ ಎಂದು ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಗುರುವಾರ ಪಟ್ಟಣದ ವಿಜಯಪುರ ರಸ್ತೆಯ ಬಸವಭವನದಲ್ಲಿ ಜಿ.ಪಂ. ಶಾಲಾ ಶಿಣ ಮತ್ತು ಸಾರತಾ ಇಲಾಖೆ ವಿಜಯಪುರ ತಾಲೂಕಾಡಳಿತ ಹಾಗೂ ೇತ್ರ ಶಿಣಾ ಇಲಾಖೆ ಸಹಯೋಗದಲ್ಲಿ ಅಖಂಡ ತಾಲೂಕು ಮಟ್ಟದ ಶಿಕರ ದಿನಾಚರಣೆ ಹಾಗೂ ನಿವತ್ತ ಶಿಕರ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ, ಮಾತನಾಡಿ, ಉನ್ಯಾಸಕರಾಗಿ ಆಗಮಿಸಿದ ಧಾರವಾಡ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಶಂಕರ ಬೆಳ್ಳುಬ್ಬಿ ಮಾತನಾಡಿ, ಸಮಾಜ ಸುಧಾರಣೆ ಮಾಡುವ ಶಕ್ತಿ ಸಾಮರ್ಥ್ಯ ಶಿಕರಿಗೆ ಮಾತ್ರ ಇದೆ ಎಂದು ಹೇಳಿದರು.

ರಾಜಕೀಯ ಧುರೀಣರು ಐ.ಪಿ.ಎಸ್​. ಕೆ.ಎ.ಎಸ್​. ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸದೇ ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದಾರೆ. ಇದು ವಿಷಾದದ ಸಂಗತಿ ಎಂದು ಹೇಳಿದರು.

ಅಧ್ಯತೆ ವಹಿಸಿದ್ದ ತಹಸೀಲ್ದಾರ ಯಮನಪ್ಪ ಸೋಮನಕಟ್ಟಿ ಮಾತನಾಡಿ, ಶಿಕರು ಮಕ್ಕಳಿಗೆ ಉತ್ತಮ ಅರ ಜ್ಞಾನ ನೀಡುವುದರ ಜೊತೆಗೆ ಅವರನ್ನು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರ ಹೊಮ್ಮಿಸುವ ಜವಾಬ್ದಾರಿ ಶಿಕರ ಮೇಲಿದೆ ಎಂದು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿ ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಮಾತನಾಡಿ, ಸರ್ಕಾರ ಮತ್ತು ಶಿಕರು ಇಂದು ಜಾತಿ, ಧರ್ಮದ ಮೇಲೆ ಶಿಣ ನೀಡುತ್ತಿರುವುದರಿಂದ ಇದು ಸಮಾಜಕ್ಕೆ ಗಂಡಾಂತರ ಇದನ್ನು ಅರಿತುಕೊಂಡು ಶಿಕರು ಸರ್ಕಾರ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಸಾನಿಧ್ಯವಹಿಸಿದ ಪಟ್ಟಣದ ಹಿರೇಮಠ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು ಮಾತನಾಡಿ, ಮಠಾಧೀಶರು ಸೇರಿದಂತೆ ದೇಶವನ್ನಾಳುವ ನಾಯಕರಿಗೂ ಕೂಡಾ ಅರದ ಜ್ಞಾನವನ್ನು ನೀಡಿದವರು ಶಿಕರು ಎಂದು ಹೇಳಿದರು.

ೇತ್ರ ಶಿಣಾಧಿಕಾರಿ ವಸಂತ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಟ್ಟಗಿಯ ಗುರುಶಾಂತ ವೀರ ಶ್ರೀಗಳು. ಮುಖ್ಯ ಅತಿಥಿಯಾಗಿ ಸುರೇಶ ಹಾರಿವಾಳ, ಬಿ.ಕೆ. ಕಲ್ಲೂರ, ಶಿವನಗೌಡ ಬಿರಾದಾರ, ಸಂಗಮೇಶ ಓಲೇಕಾರ, ಅಶೋಕ ಹಾರಿವಾಳ, ತಾ.ಪಂ. ಇ.ಓ. ಪ್ರಕಾಶ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ, ಎಸ್​.ಎಂ. ಚಿತ್ತರಗಿ, ಅಕರ ದಾಸೋಹ ಸಹಾಯಕ ನಿರ್ದೇಶಕ ಎಸ್​.ಎಚ್​. ಬಿರಾದಾರ, ದೆಹಿಕ ಶಿಕ ಪರಿವಿಕ ಎಸ್​.ಎಸ್​. ಅವಟಿ. ಸರ್ಕಾರಿ ನೌಕರರ ಸಂದ ಅಧ್ಯ ಶಿವಾನಂದ ಮಂಗಾನವರ, ಬಿ.ಪಿ. ನಾಗಾವಿ, ಅನೇಕರು ಉಪಸ್ಥಿತರಿದ್ದರು.

ೇತ್ರ ಸಮನ್ವಯಾಧಿಕಾರಿ ಸುನೀಲ ನಾಯಕ ಸ್ವಾಗತಿಸಿದರು. ಭಾರತಿ ಪಾಟೀಲ, ಎಸ್​.ಎಸ್​. ಅಂಬಲಿ ಕಾರ್ಯಕ್ರಮ ನಿರೂಪಿಸಿದರು. ಶರಣು ದಳವಾಯಿ ವಂದಿಸಿದರು.