ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ 
ಜಿಲ್ಲೆ

ಭ್ರಷ್ಟ ಸಿಎಂನಿಂದ ಬೇರೆನೂ ನಿರೀಕ್ಷೆ ಅಸಾಧ್ಯ

ನವೀನ ಬಿ.ಎಂ

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂ. ಅವ್ಯವಹಾರ ನಡೆಸಿದ ಹಗರಣದಲ್ಲಿ ಇಡಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸುಳಿವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಒಬ್ಬ ಭ್ರಷ್ಟ ಮುಖ್ಯಮಂತ್ರಿಯಿಂದ ಇದನ್ನು ಬಿಟ್ಟು ಬೇರೇನನ್ನೂ ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ಮುಡಾ ಹಗರಣದಲ್ಲಿ ಈಗಾಗಲೇ ಸಿಎಂ ಸಿಲುಕಿದ್ದಾರೆ. ಅಂತಹ ಸಿಎಂ, ತನ್ನ ಸಂಪುಟಕ್ಕೆ ಭ್ರಷ್ಟರನ್ನೇ ಸೇರಿಸಿಕೊಳ್ಳುವುದಕ್ಕೆ ಮನಸ್ಸು ಮಾಡಿದ್ದಾರೆ. ಭ್ರಷ್ಟರ ರಕ್ಷಣೆ ಮಾಡಿ ಮಂತ್ರಿ ಮಾಡುತ್ತಾರೆಂಬುದು ಈ ಸರ್ಕಾರದಲ್ಲಿ ವಿಶೇಷತೆ ಅಲ್ಲವೇ ಅಲ್ಲ ಎಂದರು.

ರಾಷ್ಟ್ರಭಕ್ತದ ಬಳಗದ ಪ್ರಮುಖರಾದ ಮಹಾಲಿಂಗ ಶಾಸ್ತ್ರಿ, ಎಸ್.ಜಿ.ಬಾಲು, ಶಂಕರ ನಾಯ್ಕ, ಕಾಚಿನಕಟ್ಟೆ ಸತ್ಯಣ್ಣ, ರಾಜಯ್ಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.