ಗಿಡನೆಡುವ ಸಂಕಲ್ಪ ಯೋಜನೆ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಜಗದೀಶ್ ಹೊಳ್ಳ ಉದ್ಘಾಟಿಸಿದರು.  
ಜಿಲ್ಲೆ

ನೆಟ್ಟ ಗಿಡವನ್ನು ಪೋಷಿಸುವುದು ಮುಖ್ಯ

ಕೋಟ: ಪ್ರಕೃತಿ ಬಗ್ಗೆ ಆಲೋಚಿಸುವ ದಿನಗಳು ಕಣ್ಣೆದುದು ಬಂದು ನಿಂತಿದೆ. ಆದರೆ ಹೆಸರಿಗಷ್ಟೇ ಗಿಡ ನೆಡುವ ಕಾಯಕ ಸೀಮಿತಗೊಳ್ಳದೆ ನಿರಂತರ ಗಿಡಗಳನ್ನು ಪೋಷಿಸುವ ಕೆಲಸವಾಗಬೇಕು ಎಂದು ನಿವೃತ್ತ ಪ್ರಾಂಶುಪಾಲ ಜಗದೀಶ್ ಹೊಳ್ಳ ಹೇಳಿದರು.

ಶನಿವಾರ ಕೋಟ ಸಹಕಾರಿ ವ್ಯವಸಾಯಕ ಸಂದ ಬಿ.ಸಿ ಹೊಳ್ಳ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಕೋಟ ಸಹಕಾರಿ ವ್ಯವಸಾಯಕ ಸಂ ಮತ್ತು ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ ‘2025 ಏಕ್ ಪೇಡ್ ವಾ ಕೆ ನಾಮ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೋಟ ಸಹಕಾರ ವ್ಯವಸಾಯಕ ಸಂ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್, ಪರ್ಸಿಯನ್ ಸೊಸೈಟಿ ಅಧ್ಯಕ್ಷ ರಾಜೇಂದ್ರ ಸುವರ್ಣ, ಕೋಟ ಸಹಕಾರ ವ್ಯವಸಾಯಕ ಸಂ ಉಪಾಧ್ಯಕ್ಷ ನಾಗರಾಜ್ ಹಂದೆ, ಕೆ.ಎಂ.ಎಫ್ ನಿರ್ದೇಶಕ ಶಿವಮೂರ್ತಿ ಉಪಾಧ್ಯಾ, ಕೋಟ ಸಹಕಾರಿ ವ್ಯವಸಾಯಕ ಸಂದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೋಭಾ ಶೆಟ್ಟಿ, ನಿರ್ದೇಶಕರಾದ ರವೀಂದ್ರ ಕಾಮತ್, ಅಜಿತ್ ದೇವಾಡಿಗ, ಶೇಖರ್ ಮರಕಾಲ, ದಿನಕರ ಶೆಟ್ಟಿ, ರಶ್ಮಿತಾ, ಉವಾ ಗಾಣಿಗ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್‌ಕುವಾರ್ ಶೆಟ್ಟಿ ಸ್ವಾಗತಿಸಿ, ಸಹಾಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಕಾಂಚನ್ ವಂದಿಸಿದರು. ಸಿಬ್ಬಂದಿ ಮಂಜುನಾಥ ನಿರೂಪಿಸಿದರು.