ಜಿಲ್ಲೆ

ಪ್ರಕೃತಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರದು

ಶಿಗ್ಗಾಂವಿ: ಮನುಷ್ಯನ ದುರಾಸೆಯಿಂದಾಗಿ ಇಡೀ ಪ್ರಕೃತಿ ಇಂದು ಆಪತ್ತಿನ ಅಂಚಿಗೆ ಹೋಗುತ್ತಿದೆ. ಈ ನಿಟ್ಟಿನಲ್ಲಿ ಸಸಿಗಳನ್ನು ನೆಡುವ ಮೂಲಕ ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜೆಸಿ ಡಾ. ಡಿ.ಎ. ಗೊಬ್ಬರಗುಂಪಿ ಹೇಳಿದರು.

ಪಟ್ಟಣದ ರಾಜೀವ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜೆಸಿಐ ಜೈಥ್ರಾ ಜೆಸಿ ಸಪ್ತಾಹದ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಜೆಸಿಐ ಸಂಸ್ಥೆ ವತಿಯಿಂದ ಶಾಲೆಯನ್ನು ದತ್ತು ಪಡೆದು ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಿಸುವ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆ ಎಂದರು.

ಜೆಸಿಐ ತಾಲೂಕು ಅಧ್ಯಕ್ಷೆ ಅನಿತಾ ಗೊಬ್ಬರಗುಂಪಿ, ರಂಜನಾ ಚಿಕ್ಕೋರ್ಡೆ, ಪ್ರಕಾಶ ಔಂಧಕರ, ಕೆ.ಬಿ. ಚನ್ನಪ್ಪ, ಗುರುರಾಜ ಹುಚ್ಚಣ್ಣನವರ, ಜಿ.ಎನ್. ಯಲಿಗಾರ, ಕುಮಾರಗೌಡ ಪಾಟೀಲ, ರಾಘವೇಂದ್ರ ದೇಶಪಾಂಡೆ ಇದ್ದರು.