ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಕೋಟ ಶ್ರೀನಿವಾಸ ಪೂಜಾರಿ, ಎಚ್.ಡಿ.ತಮ್ಮಯ್ಯ, ಎಸ್.ಎಲ್.ಭೋಜೇಗೌಡ, ಮೀನಾ ನಾಗರಾಜ್, ಸುಜಾತಾ ಶಿವಕುಮಾರ್ ಮತ್ತಿತರರಿದ್ದರು. 
ಜಿಲ್ಲೆ

ವೃದ್ದಾಪ್ಯದಲ್ಲಿ ಪಾಲಕರನ್ನು ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ

ಚಿಕ್ಕಮಗಳೂರು: ವೃದ್ದಾಪ್ಯದಲ್ಲಿ ಪಾಲಕರನ್ನು ನೋಡಿ ಕೊಳ್ಳುವುದು ಕುಟುಂಬ ಎಲ್ಲ ಸದಸ್ಯರ ನೈತಿಕ ಜವಾಬ್ದಾರಿ ಮಾತ್ರವಲ್ಲ ಅದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಿರಿಯ ನಾಗರೀಕರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಎಲ್ಲಾ ಸೇವಾ ಸಂಘ ಸಂಸ್ಥೆಗಳು, ಹಾಗೂ ನಗರಸಭೆಯಿಂದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಹಾಗೂ ರಾಷ್ಟಿçÃಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರೀಕರಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ನಾಗರೀಕರ ರಕ್ಷಣೆ ಕಾಯ್ದೆ ೨೦೧೬ರ ಅರಿವಿನ ಕೊರತೆಯಿಂದಾಗಿ ವೃದ್ದಾಪ್ಯದಲ್ಲಿ ಹಿರಿಯರನ್ನು ಅವರ ಮಕ್ಕಳು ಕಡೆಗಣಿಸುತ್ತಿರುವುದನ್ನು ಕಾಣುತ್ತೇವೆ. ಹಿರಿಯ ನಾಗರೀಕ ಹಕ್ಕುಗಳನ್ನು ತಿಳಿದುಕೊಳ್ಳುವುದು, ಜಾಗೃತಿ ಮೂಡಿಸುವುದು ಮತ್ತು ಸಂರಕ್ಷಿಸುವುದು ನಮ್ಮ ಕರ್ತವ್ಯ. ನಮ್ಮಿಂದ ಹಿರಿಯ ನಾಗರೀಕರು ನಿರೀಕ್ಷಿಸುವುದು ಕೇವಲ ಪ್ರೀತಿ, ಗೌರವ ಮತ್ತು ಅವರ ಹಕ್ಕುಗಳನ್ನು ಮಾತ್ರ. ಅದನ್ನು ನೀಡಲು ನಮ್ಮ ಸಮಾಜದಿಂದ ಸಾಧ್ಯ. ಹಾಗಾಗಿ ಎಲ್ಲರೂ ಉತ್ತಮ ನಾಗರೀಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಉದ್ಯೋಗಕ್ಕಾಗಿ ಯುವಕರು, ಮಕ್ಕಳು ಅನಿವಾರ್ಯವಾಗಿ ಗ್ರಾಮೀಣ ಪ್ರದೇಶಗಳನ್ನು ತೊರೆದು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಇದರಿಂದ ಹಿರಿಯ ನಾಗರಿಕರು ಗ್ರಾಮೀಣ ಭಾಗದಲ್ಲಿ ತಮ್ಮ ಮನೆಗಳಲ್ಲಿ ಒಂಟಿಯಾಗಿ ಉಳಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಬದುಕಿಗೆ ಭದ್ರತೆಯನ್ನು ಕೊಡಬೇಕಾಗಿರುವುದು ಸಮಾಜದ ಹೊಣೆಯಾಗಿದೆ ಎಂದು ಹೇಳಿದರು.
ಮಾನವೀಯತೆಯಿಂದ ಸಮಾಜದಲ್ಲಿ ಹಿರಿಯ ನಾಗರಿಕರನ್ನು ಸಂರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಹಿರಿಯ ನಾಗರಿಕರು ಎಂದರೆ ಕೇವಲ ಸರ್ಕಾರಿ ನೌಕರರಾಗಿ ಕರ್ತವ್ಯ ನಿರ್ವಹಿಸಿ ಬಳಿಕ ನಿವೃತ್ತಿ ಹೊಂದಿದವರು ಎಂದು ನಾವು ತಿಳಿದುಕೊಂಡಿz್ದೆÃವೆ. ಪಿಂಚಣಿ ಬಂದರು ವೃದ್ಧಾಪ್ಯದಲ್ಲಿ ಅವರ ಯೋಗಕ್ಷೇಮ ನೋಡಿಕೊಳ್ಳಬೇಕು. ಗ್ರಾಮೀಣ ಭಾಗಗಳಲ್ಲಿ ಜೀವನ ನಿರ್ವಹಿಸುತ್ತಿರುವ ಎಷ್ಟೋ ಹಿರಿಯ ನಾಗರಿಕರ ಜೀವನ ಸ್ಥಿತಿ ತುಂಬಾ ಹದಗೆಟ್ಟಿದೆ. ಅವರನ್ನು ಯಾರು ಗಮನಿಸುವುದಿಲ್ಲ. ಗದ್ದೆಗಳಲ್ಲಿ ಉತ್ತಿ, ಬಿತ್ತಿ ವ್ಯವಸಾಯ ಮಾಡಿ ಜೀವನವನ್ನು ನಿರ್ವಹಿಸುತ್ತಾರೆ. ಅಂಥವರನ್ನು ಗುರುತಿಸಿ ಅವರಿಗೆ ಸರ್ಕಾರದ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
ರಾಷ್ಟಿçÃಯ ವಯೋಶ್ರೀ ಯೋಜನೆಯಡಿ ಜಿಲ್ಲೆಯಲ್ಲಿ ೭೫೩ ಮಂದಿ ಹಿರಿಯ ನಾಗರಿಕರಿಗೆ ೫೬,೬೨,೬೨೨ರೂ ವೆಚ್ಚದಲ್ಲಿ ೨,೯೯೫ ಸಾಧನ ಸಲಕರಣೆಗಳನ್ನು ಹಾಗೂ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ೯೦,೬೮,೫೯೨ರೂ. ವೆಚ್ಚದಲ್ಲಿ ೭೨೩ ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ವಿಕಲಚೇತನರನ್ನು ಇಂದಿನ ಸಮಾಜದಲ್ಲಿ ಒಂದು ಶಾಪವಾಗಿ ಪರಿಗಣಿಸುತ್ತಿರುವುದನ್ನು ನೋಡಿz್ದÉÃವೆ. ಅವರ ನೋವು, ದುಗುಡ, ನಿಟ್ಟುಸಿರು, ಆತಂಕ, ವೇದನೆಗಳಿಗೆ ನಾವು ಸ್ಪಂಧಿಸಬೇಕು. ವಿಕಲಚೇತನರು ಸಮಾಜಕ್ಕೆ ಶಾಪವಲ್ಲ, ಅದು ಒಂದು ವರ. ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಬೇಕು. ಹಿರಿಯ ನಾಗರಿಕರು ಸಹ ತಮ್ಮ ಬದುಕಿನಲ್ಲಿ ಸಾಕಷ್ಟು ನೊಂದಿರುತ್ತಾರೆ. ಅಂತವರನ್ನು ಸಮಾಜ ಗೌರವದಿಂದ ಕಾಣಬೇಕು ಮತ್ತು ತಂದೆ ತಾಯಿಯರನ್ನು ಗೌರವಿಸಿ ಅವರನ್ನು ಪ್ರೀತಿ ವಿಶ್ವಾಸದಿಂದ ಕಂಡಾಗ ಮಾತ್ರ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯ ಎಂದು ಹೇಳಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ಶೇ. ೧೧ರಿಂದ ೧೨ರಷ್ಟು ಹಿರಿಯ ನಾಗರೀಕರಿದ್ದಾರೆ. ೨೦೧೬ರಲ್ಲಿ ಹಿರಿಯ ನಾಗರೀಕರ ಕಾಯಿದೆ ಜಾರಿಗೆ ಬಂದಿತ್ತು. ಜಿಲ್ಲೆಯಲ್ಲಿ ಹೆಚ್ಚು ವೃದ್ಧಾಶ್ರಮಗಳು ಇಲ್ಲದೆ ಇರುವುದು ಸಂತಸದ ವಿಷಯವಾಗಿದೆ. ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಆರೋಗ್ಯಕರ ವಾತಾವರಣದಲ್ಲಿ ಜೀವಿಸಿದಾಗ ಮಾತ್ರ ಹೆಚ್ಚು ಕಾಲ ಬದುಕಲು ಸಾಧ್ಯವಾಗುತ್ತದೆ ಎಂದರು.
ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವ ಹಿರಿಯ ನಾಗರಿಕ ದಿನಾಚರಣೆಯನ್ನು ೧೯೯೧ ರಿಂದ ಆಚರಿಸುತ್ತಿರುವುದು ಒಂದು ಸಂತೋಷದ ವಿಷಯವಾಗಿದೆ. ಭಾವನೆ, ಭಾವೈಕ್ಯತೆಯಿಂದ ತುಂಬಿರುವ ನಮ್ಮ ನಾಡಿನಲ್ಲಿ ಸಂಬAಧಗಳಿಗೆ, ತಾಯಿ, ತಂದೆಗಳಿಗೆ, ನಮ್ಮ ಹಿರಿಯರಿಗೆ ಗೌರವ ಪ್ರೀತಿ-ವಿಶ್ವಾಸದಿಂದ ನಾವು ಕಾಣಬೇಕು. ಇಲ್ಲದಿದ್ದರೆ ಸಂಸ್ಕÈತಿ, ಸಹಬಾಳ್ವೆ, ಸಹಭಾಗಿತ್ವ ಎಂದು ಕರೆಸಿಕೊಳ್ಳುವ ನಮ್ಮ ನಾಡಿಗೆ ಅರ್ಥವೇ ಇರುವುದಿಲ್ಲ ಎಂದು ಹೇಳಿದರು.
ಹಿರಿಯ ನಾಗರಿಕರು ಮತ್ತು ವಿಕಲಚೇತನರು ಈ ಇಬ್ಬರೂ ಸಹ ಒಂದೇ ರೀತಿಯಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಅವರನ್ನು ಸಮಾಜದಲ್ಲಿ ಗೌರವಿಸಿ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮಾಡಬೇಕು. ಮಕ್ಕಳು ತಮ್ಮ ತಂದೆ ತಾಯಿಯರನ್ನು ಪ್ರೀತಿಯಿಂದ ನೋಡಿಕೊಂಡು ಮನೆಯಲ್ಲೇ ಇರಿಸಿಕೊಂಡರೆ. ವೃದ್ಧಾಶ್ರಮಗಳು ಕ್ರಮೇಣ ಕಡಿಮೆಯಾಗುತ್ತವೆ. ನಮ್ಮ ಹಿರಿಯ ವಯಸ್ಸಾದ ನಾಗರೀಕರ ಜೀವನದ ಅನುಭವಗಳನ್ನು ಇಂದಿನ ಯುವಕರು ಮಾದರಿಯಾಗಿ ಪಡೆದುಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ನಮ್ಮ ಧರ್ಮ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಭಜಂತ್ರಿ, ಅಲಿಂಕೋ ಸಂಸ್ಥೆಯ ಮುಖ್ಯಸ್ಥ ಅಶೋಕ್ ಕುಮಾರ್, ಮಾನಸಿಕ ರೋಗ ತಜ್ಞ ಡಾ. ಸಂಜಯ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಮತ್ತಿತರರಿದ್ದರು.