ಕೋಲಾರ: ಪರಿಸರ ಉಳಿಸಿ ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಪರಿಸರ ಉಳಿಸಿದರೆ ಮಾತ್ರ ನಮ್ಮ ಉಳಿವು ಸಾಧ್ಯ ಎಂದು ಜಿಪಂ ಉಪಕಾರ್ಯದರ್ಶಿ ಬಿ.ಶಿವಕುಮಾರ್ ಹೇಳಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜಿಪಂ, ತಾಪಂ, ಅಸರ, ಗ್ರಾಮವಿಕಾಸ ಯೋಜನೆಯಡಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ‘ಹವಾವಾನ ಬದಲಾವಣೆ ಹಾಗೂ ಹವಾವಾನ ಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರದ’ ಕುರಿತ ಶುಕ್ರವಾರ ಆಯೋಜಿಸಿದ್ದ ಸವಾಲೋಚನಾ ಸಭೆಯಲ್ಲಿ ಮಾತನಾಡಿದರು. ವಾನವನ ಅತಿಕ್ರಮಣದಿಂದಾಗಿ ಹವಾವಾನ ವೈಪರೀತ್ಯಕ್ಕೆ ಕಾರಣವಾಗಿದೆ. ತಾಪವಾನ ಬದಲಾವಣೆಯಿಂದ ಸೂರ್ಯನ ಕಿರಣಗಳು ಭೂಮಿಯಿಂದ ವಾಪಾಸ್ ಅಗದೆ ಇಂಗಾಲವಾಗಿ ವಾನವನ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಕಾಲಿಕ ಮಳೆ, ಜಡಿ ಮಳೆ, ಬರಗಾಲ ಇತ್ಯಾದಿಗಳಿಗೆ ಕಾರಣವಾಗಲಿದೆ. ಬೆಳೆಗಳ ಇಳುವರಿ ಕಡಿಮೆ, ಬೆಳೆಗಳ ಬೆಳವಣಿಕೆ ಕುಂಠಿತ, ಇತ್ಯಾದಿಗಳಿಂದಾಗಿ ಕಷಿಯ ಮೇಲೂ ಕೆಟ್ಟ ಪರಿಣಮವಾಗಲಿದೆ. ಇದೆಲ್ಲವನ್ನು ನಿಯಂತ್ರಿಸುವ ಶಕ್ತಿ ಪರಿಸರಕ್ಕೆ ವಾತ್ರ ಇದೆ. ಹಾಗಾಗಿ ಪರಿಸರವನ್ನು ನಾವು ಉಳಿಸಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ ಎದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಗ್ರಾಮ ಪಂಚಾಯತಿ ಅಧಿಕಾರಿಗಳು ಪ್ರಾವಾಣಿಕ ಸೇವೆಗೆ ಆದ್ಯತೆ ನೀಡುವ ಮೂಲಕ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ವಾಡಿದಾಗ ವಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು.
ಜಿಪಂ ಯೋಜನಾ ನಿರ್ದೇಶಕ ರವಿಚಂದ್ರನ್, ಆಸರೆ ಸಂಸ್ಥೆಯ ಯೋಜನೆ ಮತ್ತು ಕಾರ್ಯಾಚರಣೆ ವ್ಯವಸ್ಥಾಪಕ ಕೆ.ಸುದೀಪ್, ತಾಪಂ ಇಒ ಎ.ಜೋಸ್ೆ, ಚೌಡಪ್ಪ, ಹೂಹಳ್ಳಿ ನಾಗರಾಜ್ ಇದ್ದರು.