ಮುಧೋಳದ ಸಾಯಿನಿಕೇತನ ಶಾಲೆಯ ಸಭಾಭವನದಲ್ಲಿ ನಡೆದ ಬೆಳಗಾವಿ ವಿಭಾಗಮಟ್ಟದ ಕೆಜೆವಿಎಸ್ ಸಮ್ಮೇಳನವನ್ನು ಮನೋರೋಗ ತಜ್ಞ ಸಿ.ಆರ್. ಚಂದ್ರಶೇಖರ ಉದ್ಘಾಟಿಸಿದರು. ರಾಜೇಶ ವಾಲಿ, ಡಾ. ಶಿವಾನಂದ ಕುಬಸದ, ಡಾ. ಸಿದ್ದಣ್ಣ ಬಾಡಗಿ, ವೆಂಕಟೇಶ ಗುಡೆಪ್ಪನವರ, ಇ.ಬಸವರಾಜು ಇತರರಿದ್ದರು. 
ಜಿಲ್ಲೆ

ಸೈನಿಕರ ಆರೋಗ್ಯ ವಿಚಾರಿಸುವುದು ಎಲ್ಲರ ಕರ್ತವ್ಯ

ಮುಧೋಳ: ಸೈನಿಕರ ಆರೋಗ್ಯ ಹಾಗೂ ಅವರ ಕುಶಲೋಪರಿ ವಿಚಾರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಮನೋರೋಗ ತಜ್ಞ ಡಾ.ಸಿ. ಆರ್. ಚಂದ್ರಶೇಖರ ಹೇಳಿದರು.

ನಗರದ ಶಿರಡಿ ಸಾಯಿ ಶಿಕ್ಷಣ ಸಂಸ್ಥೆಯ ಸಾಯಿನಿಕೇತನ ಸಿ.ಬಿ.ಎಸ್.ಇ ಶಾಲಾ ಆವರಣದಲ್ಲಿ ಕೇಂದ್ರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಘಟಕ ಹಾಗೂ ಮುಧೋಳ ತಾಲೂಕು ಘಟಕದಿಂದ ಬೆಳಗಾವಿ ವಿಭಾಗ ಕೆಜೆವಿಎಸ್ ಸಮ್ಮೇಳನ ಹಾಗೂ 69ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ 69 ಮಾಜಿ ಯೋಧರಿಗೆ ಸೈನಿಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿರಡಿ ಸಾಯಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ರಾಜೇಶ ವಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ವಿಜ್ಞಾನ ಬೇಕೇ ಬೇಕು. ಎಲ್ಲ ರಂಗದಲ್ಲಿಯೂ ವಿಜ್ಞಾನ ಕಾಣಬಹುದು. ಸೈನಿಕರು ದೇಶ ಕಾಯಲು ಮಾತ್ರವಲ್ಲ, ನೆರೆ ಬಂದ ಸಮಯದಲ್ಲಿ, ಕಷ್ಟಕಾಲದಲ್ಲಿ ಆಪತ್ಭಾಂಧವರಾಗುತ್ತಾರೆ ಎಂದು ಹೇಳಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯದರ್ಶಿ ಇ. ಬಸವರಾಜು ಸಮಿತಿ ಗೌರವಾಧ್ಯಕ್ಷ ಡಾ. ಶಿವಾನಂದ ಕುಬಸದ, ನಿವೃತ್ತ ಮೇಜರ್ ಅಪ್ಪಾಸಾಬ ನಿಂಬಾಳಕರ, ಹಿರಿಯ ವಕೀಲ ಪ್ರಕಾಶ ವಸ್ತ್ರದ ಮಾತನಾಡಿದರು.

ಪಶುಸಂಗೋಪನಾ ಇಲಾಖೆ ನಿವೃತ್ತ ಉಪ ನಿರ್ದೇಶಕ ಡಾ.ಆರ್. ಎ. ಕುಲಕರ್ಣಿ, ವಿಜಯಪುರ ಜಿಲ್ಲಾಧ್ಯಕ್ಷ ಜಿ. ಎಸ್. ಕಾಂಬಳೆ, ಜಿಲ್ಲಾಧ್ಯಕ್ಷ ಸಿದ್ದಣ್ಣ ಬಾಡಗಿ, ತಾಲೂಕು ಅಧ್ಯಕ್ಷ ವೆಂಕಟೇಶ ಗುಡೆಪ್ಪನವರ, ಮುಖ್ಯಶಿಕ್ಷಕ ವೆಂಕಟೇಶ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಸಂಜಯ ನಡುವಿನಮನಿ, ಉಮಾ ಕಾತರಕಿ, ಚಂದ್ರಶೇಖರ ನಾಗವಂದ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಶೈಲ್ ಪಸಾರ, ಶೇಷಪ್ಪ ಪೋತರಡ್ಡಿ, ಜಿ.ಕೆ. ಹುಸೇನಬಾಯಿ, ಗೀತಾ ಕಲೂತಿ, ಅಶ್ವಿನಿ ಅಂಗಡಿ, ಆರ್.ಐ. ಹಣಗಿ ಇತರರಿದ್ದರು.

69 ಮಾಜಿ ಯೋಧರಿಗೆ ಸೈನಿಕ ರತ್ನ ಪ್ರಶಸ್ತಿ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.