ಕುಂಬಳೆ: ಮಹಿಳೆಯರು ದೇಶೀಯವಾಗಿ ಮತ್ತು ಜಾಗತಿಕವಾಗಿ ವಿಜ್ಞಾನ, ತಂತ್ರಜ್ಞಾನ, ರಾಜಕೀಯ ಮತ್ತು ಅರ್ಥಶಾಸ್ತ್ರ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗಳನ್ನು ಸಾಧಿಸಿದ್ದಾರೆ. ಸಾಧನೆ ಮಾಡಿದ ಮಹಿಳೆಯರನ್ನು ಈ ದಿನವು ಅಕಾಡೆಮಿ ಗುರುತಿಸುತ್ತಿರುವುದು ತುಂಬಾ ಶ್ಲಾಘನೀಯ ಎಂದು ಡಾ.ಸುಪ್ರಿಯಾ ಹೇಳಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ವತಿಯಿಂದ ಹಲವು ವರ್ಷಗಳಿಂದ ಬಡ ರೋಗಿಗಳ ಆರೈಕೆ ಮತ್ತು ಶುಶ್ರೂಷೆಗಳಲ್ಲಿ ತೊಡಗಿಸಿಕೊಂಡು ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ಔಷಧಗಳನ್ನಿತ್ತು ರೋಗ ಮುಕ್ತರನ್ನಾಗಿಸಿದ ನಾಟಿ ವೈದ್ಯೆ, ಹರಿಕಥೆ ಭಜನೆ ಯಕ್ಷಗಾನ ಮೊದಲಾದ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹಕರಾಗಿರುವ ಯಮುನಾ ಎಸ್.ಶೆಟ್ಟಿ ಕುದ್ರೆಪ್ಪಾಡಿಗುತ್ತು ಅವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಆಶ್ರಯದಲ್ಲಿ ಯೋಗ ಪೋರ್ ಕಿಡ್ಸ್ ಕಾಸರಗೋಡು ಸಹಕಾರದೊಂದಿಗೆ ಗೌರವಿಸಿ ಮಾತನಾಡಿದರು.
ಅಕಾಡೆಮಿಯ ಮಹಿಳಾ ಘಟಕದ ತೇಜಕುಮಾರಿ ಅಧ್ಯಕ್ಷತೆ ವಹಿಸಿದ್ದರು.ದಿವ್ಯ, ಯಮುನಾ ಹಾಗೂ ಯೋಗ ಫೋರ್ ಕಿಡ್ಸ್‌ನ ಮಕ್ಕಳು ಉಪಸ್ಥಿತರಿದ್ದರು. ಮಮತಾ ಸ್ವಾಗತಿಸಿ, ದಿವ್ಯಾ ವಂದಿಸಿದರು.