ಜಿಲ್ಲೆ

ದಶಕವಾದರೂ ಸ್ವಚ್ಛತಾ ಭಾಗ್ಯ ಕಂಡಿರಲಿಲ್ಲ

ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ: ಕೋಟೆನಗರಿ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ಓವರ್ ಹೆಡ್ ಟ್ಯಾಂಕ್‌ಗಳ ಪೈಕಿ ಹಲವು 10 ವರ್ಷ, ಐದಾರು ವರ್ಷ, ಎರಡ್ಮೂರು ವರ್ಷವಾದರೂ ಸ್ವಚ್ಛತೆ ಕಂಡಿರಲಿಲ್ಲ.

ಕೆಲವು ಐದಾರು ತಿಂಗಳಿಗೊಮ್ಮೆ ಸ್ವಚ್ಛಗೊಂಡರೂ ಪೂರ್ಣ ಪ್ರಮಾಣದಲ್ಲಿ ಶುಚಿ ಆಗುತ್ತಿರಲಿಲ್ಲ. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾಗಿ ಕವಾಡಿಗರಹಟ್ಟಿಯಲ್ಲಿ ದೊಡ್ಡ ದುರಂತ ಸಂಭವಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯಿತು. ಒಂದು ರೀತಿ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದುಂಟು….

ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಶಾಂತಿಸಾಗರ ಇವೆರಡು ಚಿತ್ರದುರ್ಗ ನಗರ ಹಾಗೂ ತಾಲೂಕಿನ ವಿವಿಧ ಭಾಗಗಳಿಗೆ ನೀರು ಪೂರೈಕೆ ಮಾಡುವ ಜಲಮೂಲಗಳು. ಆದರೆ, ಶಾಂತಿಸಾಗರದ ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳು ಪತ್ತೆಯಾದ ಬೆನ್ನಲ್ಲೇ ಜಿಲ್ಲೆಯ 9ಕ್ಕೂ ಅಧಿಕ ಗ್ರಾಮಗಳಿಗೆ ನೀರು ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕವಾಡಿಗರಹಟ್ಟಿ ದಲಿತ ಕಾಲನಿಯಲ್ಲಿ ಅನಾಹುತ ಸೃಷ್ಟಿಯಾದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು 20 ದಿನ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳಿಸಿ, ಸ್ವಚ್ಛತಾ ಕಾರ್ಯಕ್ಕೆ ಒತ್ತು ನೀಡಿದ್ದರು. ಈ ವೇಳೆ ಒಂದೊಂದು ಓವರ್ ಹೆಡ್ ಟ್ಯಾಂಕ್‌ಗಳಲ್ಲೂ 1.5ನಿಂದ 2.5 ಅಡಿಯಷ್ಟು ಮಣ್ಣು, ಪಾಚಿ, ಅನುಪಯುಕ್ತ ವಸ್ತುಗಳು, ಕಂದು ಮತ್ತು ಹಸಿರು ಬಣ್ಣಕ್ಕೆ ತಿರುಗಿದ್ದ ನೀರನ್ನು ಹೊರತೆಗೆಯಲು ಸಿಬ್ಬಂದಿ ದುಸ್ಸಾಹಸಪಟ್ಟಿದ್ದಾರೆ. ಮಿನಿ ಟ್ಯಾಂಕ್‌ಗಳನ್ನು ಶುಚಿಗೊಳಿಸುವ ಕಾರ್ಯವೂ ಹಲವೆಡೆ ಭರದಿಂದ ಸಾಗಿದೆ.

ಪೈಪ್‌ಲೈನ್‌ಗಳ ಮೇಲೂ ನಿಗಾ: ಈ ದುರ್ಘಟನೆ ಮಾಸುವ ಮುನ್ನವೇ ಮುದ್ದಾಪುರ ಗ್ರಾಪಂನ ಹೊಸಹಟ್ಟಿಯಲ್ಲಿ ವಾಂತಿ-ಭೇದಿ ಪ್ರಕರಣ ಕಾಣಿಸಿಕೊಂಡಿದ್ದು, ಇದಕ್ಕೆ ಪೈಪ್‌ಲೈನ್ ಹೊಡೆದಿರುವುದು ಕಾರಣ ಎಂಬುದಾಗಿ ಮೇಲ್ನೋಟಕ್ಕೆ ತಿಳಿದು ಬಂದಿದೆ. ಹೀಗಾಗಿ ಪೈಪ್‌ಲೈನ್‌ಗಳ ಮೇಲೂ ನಿಗಾವಹಿಸಲು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಸೂಚಿಸಿದ್ದಾರೆ.

ಅಗತ್ಯ ಮೂಲಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಬೇಕು. ಸ್ಥಳೀಯ ಸಂಸ್ಥೆಗಳು ಪ್ರತಿ ವರ್ಷ ನಲ್ಲಿ ಕಂದಾಯ ಕೂಡ ತಪ್ಪದೇ ಕಟ್ಟಿಸಿಕೊಳ್ಳುತ್ತಾರೆ. ಆದರೆ, ಹಲವೆಡೆ ಜಲಸಂಗ್ರಹಾಗಾರಗಳ ಸ್ವಚ್ಛಗೊಳಿಸುವ ಕಾರ್ಯ ಕವಾಡಿಗರಹಟ್ಟಿ ಘಟನೆಗೂ ಮುನ್ನ ಸಮರ್ಪಕವಾಗಿ ಆಗುತ್ತಿರಲಿಲ್ಲ. ಇದಕ್ಕೆ ಮೀಸಲಿಟ್ಟ ಹಣವನ್ನು ಕೆಲ ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮದ ಅಗತ್ಯವಿದೆ ಎಂಬುದು ಸಾರ್ವಜನಿಕರ ಒತ್ತಾಯ.

ನಗರದಲ್ಲಿ 12 ಓವರ್ ಹೆಡ್ ಟ್ಯಾಂಕ್‌ಗಳಿದ್ದು, ಸ್ವಚ್ಛಗೊಳಿಸುವ ಸಲುವಾಗಿ ಹತ್ತಲು ಸಾಧ್ಯವಾಗದ ಒಂದೆರಡು ಟ್ಯಾಂಕ್ ಡೆಮಾಲಿಷ್ ಮಾಡಲು ತೀರ್ಮಾನಿಸಲಾಗಿದೆ. ಸದ್ಯ ಜಲಸಂಗ್ರಹಾಗಾರಗಳು ಸ್ವಚ್ಛತಾ ಭಾಗ್ಯ ಕಾಣುತ್ತಿದ್ದು, ಪ್ರತಿ 2 ತಿಂಗಳಿಗೊಮ್ಮೆ ಶುಚಿಗೊಳಿಸಬೇಕು ಎಂದು ನಗರಸಭೆ ತೀರ್ಮಾನಿಸಿದೆ. ಇದು ಸಾಧ್ಯವಾಗದಿದ್ದರೆ, ಕನಿಷ್ಟ 3 ಅಥವಾ 6 ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸಿದರೆ ಸಾಕು ಎಂಬುದು ಸಾರ್ವಜನಿಕರ ವಾದ.

ಮುಖ್ಯಾಂಶಗಳು: ನಗರ ಸ್ವಚ್ಛತೆಗೂ ಬೇಕಿದೆ ಹೆಚ್ಚಿನ ಆದ್ಯತೆ. ಮೂರು ತಿಂಗಳಿಗೊಮ್ಮೆ ನೀರಿನ ಗುಣಮಟ್ಟ ಪರೀಕ್ಷೆ. ಆರ್‌ಒ ಅಥವಾ ಕುದಿಸಿ ಆರಿಸಿದ ನೀರು ಬಳಸುವಂತೆ ಜಾಗೃತಿ.

ಆರ್‌ಒ ಘಟಕಗಳ ನಿರ್ವಹಣೆ ಕೊರತೆ: ನಗರದಿಂದ ಹತ್ತನೆರಡು ಕಿ.ಮೀ ದೂರದಲ್ಲಿರುವ ತಾಲೂಕಿನ ಅನೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸಮರ್ಪಕವಾಗಿಲ್ಲ. 6 ತಿಂಗಳು, ಎರಡ್ಮೂರು ವರ್ಷವಾದರೂ ದುರಸ್ತಿಗೆ ಮುಂದಾಗಿಲ್ಲ. ಪಿಡಿಒ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ನಳದಿಂದ ಬರುವ ನೀರನ್ನೇ ಕುಡಿಯಲು, ಬಳಸಲು ಉಪಯೋಗಿಸುತ್ತಿದ್ದೇವೆ ಎಂದು ಆರೋಗ್ಯ ಇಲಾಖೆ ನಡೆಸಿದ ಸರ್ವೇ ವೇಳೆ ಗ್ರಾಮಸ್ಥರು ತಿಳಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಶುದ್ಧ ನೀರು: ಜಿಲ್ಲಾಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುವ ಕಾರಣ ಶುದ್ಧ ಕುಡಿಯುವ ನೀರಿನ ಮೂರು ಘಟಕ ನಿರ್ಮಿಸಲಾಗಿದೆ. ಎರಡು ಕಾರ್ಯನಿರ್ವಹಿಸುತ್ತಿದ್ದು, ಒಂದು ದುರಸ್ತಿಯಲ್ಲಿದೆ. ಇನ್ನೂ ನಗರ ಆರೋಗ್ಯ ಕೇಂದ್ರ ಹಾಗೂ ತಾಲೂಕಿನ ಪಿಎಚ್‌ಸಿಗಳಲ್ಲಿ ಮನೆಗಳಲ್ಲಿ ಬಳಸುವ ವಾಟರ್ ಪ್ಯುರಿಫಿಯರ್ (ಮಿನಿ ಆರ್‌ಒ ಯೂನಿಟ್) ಇದ್ದು, ಹೀಗಾಗಿ ಶುದ್ಧ ನೀರನ್ನೇ ಕೊಡಲಾಗುತ್ತಿದೆ ಎಂದು ಡಿಎಚ್‌ಒ ಡಾ.ಆರ್.ರಂಗನಾಥ್ ತಿಳಿಸಿದ್ದಾರೆ.

: ಕೋಟೆನಗರಿ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ಓವರ್ ಹೆಡ್ ಟ್ಯಾಂಕ್‌ಗಳ ಪೈಕಿ ಹಲವು 10 ವರ್ಷ, ಐದಾರು ವರ್ಷ, ಎರಡ್ಮೂರು ವರ್ಷವಾದರೂ ಸ್ವಚ್ಛತೆ ಕಂಡಿರಲಿಲ್ಲ.