ಬೈಲಹೊಂಗಲ: ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬಜೆಟ್ನಲ್ಲಿ ಅನುದಾನ ೂಷಣೆ ಮಾಡದೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಮಂಗಳವಾರ ಕರೆ ನೀಡಲಾಗಿದ್ದ ಬೈಲಹೊಂಗಲ ಬಂದ್ ಯಶಸ್ವಿಯಾಯಿತು.
ಎಲ್ಲ ವ್ಯಾಪಾರಸ್ಥರು ಬೆಂಬಲ ವ್ಯಕ್ತಪಡಿಸಿದ್ದರಿಂದ ವಾಹನಗಳ ಸಂಚಾರ, ಜನರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪಟ್ಟಣದ ಚನ್ನಮ್ಮ ಸಮಾಧಿಯ ಮುಂಭಾಗದಿಂದ ಆರಂಭಗೊಂಡ ಪ್ರತಿಭಟನಾ ಬೈಕ್ ರ್ಯಾಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಸಭೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಸರ್ಕಾರ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ರಚಿಸಿದ ಸುಮಾರು 17 ವರ್ಷಗಳಲ್ಲಿ ಕೇವಲ 42 ಕೋಟಿ ರೂ.ಬಿಡುಗಡೆ ಮಾಡಿದೆ. ಉಳಿದ ಪ್ರಾಧಿಕಾರಗಳಿಗೆ ಅನುದಾನ ನೀಡಿರುವುದು ಸ್ವಾಗತಾರ್ಹ. ಆದರೆ, ಪ್ರಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯ ಕುರುಹುಗಳ ಅಭಿವೃದ್ಧಿಗೆ ಹಣ ನೀಡದೆ ತಾರತಮ್ಯ ಮಾಡುತ್ತಿರುವುದು ಏಕೆ? ಎಂದು ಪ್ರಶ್ನಿಸಿದರು.
ಜೆಡಿಎಸ್ ಜಿಲ್ಲಾಧ್ಯ ಶಂಕರ ಮಾಡಲಗಿ ಮಾತನಾಡಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಅಧಿವೇಶನದಲ್ಲಿ ಶಾಸಕರು ಸರ್ಕಾರದ ಗಮನ ಸೆಳೆಯಬೇಕು. ಇಲ್ಲವಾದರೆ ಅವರ ಮನೆ ಮುಂದೆ ಅಡುಗೆ ತಯಾರಿಸಿ ಊಟ ಮಾಡುವುದರೊಂದಿಗೆ ಧರಣಿ ಕೈಗೊಳ್ಳುವುದಾಗಿ ತಿಳಿಸಿದರು.
ಪಂಚಮಸಾಲಿ ಸಮುದಾಯದ ತಾಲೂಕಾಧ್ಯ ಶ್ರೀಶೈಲ ಬೋಳನ್ನವರ, ಕಲಾವಿದ ಸಿ.ಕೆ. ಮೇಕ್ಕೆದ, ಕಿತ್ತೂರು ಕರ್ನಾಟಕ ಸೇನೆ ಅಧ್ಯ ಮಹಾದೇವ ತಳವಾರ ಮಾತನಾಡಿದರು.
ಎಪಿಎಂಸಿ ಮಾಜಿ ಅಧ್ಯ ಸಿ.ಆರ್. ಪಾಟೀಲ, ಜಿಪಂ ಮಾಜಿ ಸದಸ್ಯ ಬಿ.ಎಂ.ಚಿಕ್ಕನಗೌಡರ, ಚನ್ನಮ್ಮ ಸ್ಮರಣೋತ್ಸವ ಸಮಿತಿ ಅಧ್ಯ ಮುರುಗೇಶ ಗುಂಡ್ಲೂರ, ವಿಎಚ್ಪಿ ಜಿಲ್ಲಾಧ್ಯ ಪ್ರಮೋದಕುಮಾರ ವಕ್ಕುಂದಮಠ, ಶಿವಾನಂದ ಕೋಲಕಾರ, ರಫೀಕ್ ಬಡೇರ, ನಿಂಗಪ್ಪ ಚೌಡನ್ನವರ, ಗಿರೀಶ ಹರಕುಣಿ, ವೀರೇಶ ಹಲಕಿ, ಸುರೇಶ ಸಂಪಗಾಂವ, ಲಾಲಚಂದ ಗೂಗಡ, ಬಿಜೆಪಿ ಮುಖಂಡ ವಿಜಯ ಮೆಟಗುಡ್ಡ, ಧೂಳಪ್ಪ ಇಟಗಿ, ಎ್.ಎಸ್.ಸಿದ್ದನಗೌಡರ, ಸುಭಾಷ ತುರಮರಿ, ಮಡಿವಾಳಪ್ಪ ಹೋಟಿ, ರಾಜು ಭರಮಗೌಡರ, ಪ್ರಕಾಶ ಸೊಗಲದ, ಗಂಗಪ್ಪ ಗುಗ್ಗರಿ, ರಾಜು ಬೋಳನ್ನವರ, ಗುಂಡಪ್ಪ ಸನದಿ, ಶಾಂತಾ ಮಡ್ಡಿಕಾರ, ವಕೀಲರ ಸಂದ ಅಧ್ಯ ಎಂ.ಆರ್.ಮೆಳವಂಕಿ, ಎಂ.ವೈ.ಸೋಮನ್ನವರ, ಶ್ರೀಶೈಲ ಶರಣಪ್ಪನವರ, ರತ್ನಾ ಗೋದಿ, ಪ್ರೇಮಾ ಅಂಗಡಿ, ಮಡಿವಾಳಪ್ಪ ಚಿಕ್ಕೊಪ್ಪ, ಬಾಳನಗೌಡ ಪಾಟೀಲ, ಸಂತೋಷ ಕೊಳವಿ, ಸಂತೋಷ ಹಡಪದ, ಮುದಕಪ್ಪ ತೋಟಗಿ, ಮಹಾಂತೇಶ ಕೂಲಿನವರ, ಸುಭಾಷ ಬಾಗೇವಾಡಿ, ರಾಜು ನರಸನ್ನವರ, ಚಂದ್ರು ಕೊಪ್ಪದ ಇತರರಿದ್ದರು.