ಜಿಲ್ಲೆ

ಭೂರಹಿತರಿಗೆ ಹಕ್ಕುಪತ್ರ ವಿತರಿಸಿ

ಗಿರೀಶ ಸಗರ

ವಿಜಯಪುರ: ಬಗರ್​ ಹುಕುಂ ಭೂ ಸಾಗುವಳಿ ಮಾಡುತ್ತಿರುವ ಭೂರಹಿತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಬಗರ್​ ಹುಕುಂ ಸಾಗುವಳಿದಾರರ ಭೂ ಕಾರ್ಯಕಾರಿ ಮಂಡಳಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂದ ಪದಾಧಿಕಾರಿಗಳು ಇತ್ತೀಚೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂದ ಪ್ರಧಾನ ಕಾರ್ಯದರ್ಶಿ ಭೀಮರಾಯ ಪೂಜಾರಿ ಹಾಗೂ ಬಗರ್​ ಹುಕುಂ ಭೂಸಾಗುವಳಿದಾರ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಹೇಮಲು ಜಾಧವ ಮಾತನಾಡಿ, 1998&99 ರಲ್ಲಿ ಬಗರ್​ ಹುಕುಂ ಭೂ ಹಂಚಿಕೆ, ಅಡಿಯಲ್ಲಿ ಅರ್ಜಿ ನಮೂನೆ ಫಾರ್ಮ ನಂ. 52/53/57 ರ ಮೂಲಕ ಜಾಲಗೇರಿ ಗ್ರಾಮದ ಭೂರಹಿತರು ಸರ್ಕಾರಕ್ಕೆ ಸಂಬಂಧಪಟ್ಟ ಸರ್ವೇ ನಂಬರ್​ಗಳಲ್ಲಿ ಅರ್ಜಿ ಸಲ್ಲಿಸಿ 98 ರಿಂದ ಇಲ್ಲಿಯವರೆಗೆ ಸಾಗುವಳಿ ಮಾಡುತ್ತಾ ಬಂದಿರುವುದಾಗಿ ತಿಳಿಸಿದರು.

ಸದ್ಯ ಸಾಗುವಳಿ ಮಾಡುತ್ತಿರುವ ಜಮೀನುಗಳ ಹಕ್ಕುಪತ್ರ ನೀಡಿಲ್ಲ, ಸಂಬಂಧಪಟ್ಟ ಮಾನ್ಯ ತಹಶೀಲದಾರ ಸಾಹೇಬರಿಗೆ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಕೂಡಲೇ ನಮಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಸಾಬು ವಿಜಯಪುರ, ಗೋವಿಂದ ಲಮಾಣಿ, ಹೇಮು ಜಾಧವ, ವೇಣು ಲಮಾಣಿ, ಬಿಕ್ಕು ರಾಠೋಡ, ಜಗಪ್​ ರಾಥೋಡ, ಲಾವು ರಾಠೋಡ, ಬಾಬು ಲಮಾಣಿ, ಸುರೇಶ್​ ಚವಾಣ, ಅಪ್ಪು ಜಾಧವ, ಹುನ್ನು ರಾಠೋಡ, ಗೋವಿಂದ ರಾಠೋಡ ಮತ್ತಿತರರಿದ್ದರು.

ಭೂರಹಿತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ವಿವಿಧ ಸಂಟನೆಗಳ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು. ಗೋವಿಂದ ಲಮಾಣಿ, ಹೇಮು ಜಾಧವ, ವೇಣು ಲಮಾಣಿ ಮತ್ತಿತರರಿದ್ದಾರೆ.