ಕಡ್ಡಾಯ ಕನ್ನಡ ನಾಮಲಕ ಹಾಕಲು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ನಮ್ಮ ಕರ್ನಾಟಕ ಸೇನೆಯಿಂದ ಶನಿವಾರ ಮನವಿ ಸಲ್ಲಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಕೆ.ಕೊಂಡಪ್ಪ, ಪದಾಕಾರಿಗಳಾದ ವೀರೇಶ, ನವೀನ್, ತಿಮ್ಮಪ್ಪ, ರಾಜಶೇಖರ, ವಿನೋದ, ಮಹೇಶ, ಶ್ರೀನಿವಾಸ, ಹನುಮಂತ ಇದ್ದರು. 
ಜಿಲ್ಲೆ

ಕನ್ನಡದಲ್ಲಿ ನಾಮಲಕ ಹಾಕುವಂತೆ ಆದೇಶ ಹೊರಡಿಸಿ

ರಾಚಯ್ಯ ಸ್ವಾಮಿ

ರಾಯಚೂರು: ಜಿಲ್ಲೆಯಾದ್ಯಂತ ಎಲ್ಲ ವ್ಯಾಪಾರ, ವಾಣಿಜ್ಯ ಅಂಗಡಿಗಳ ನಾಮಲಕವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಹಾಕುವಂತೆ ಆದೇಶ ಹೊರಡಿಸಬೇಕು ಎಂದು ನಮ್ಮ ಕರ್ನಾಟಕ ಸೇನೆಯಿಂದ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ನಾಮಲಕಗಳಲ್ಲಿ ಶೇ.70ರಷ್ಟು ಭಾಗ ಕನ್ನಡದಲ್ಲಿರಬೇಕು. ಉಳಿದ ಶೇ.30ರಷ್ಟು ಭಾಗದಲ್ಲಿ ಇತರ ಭಾಷೆ ಬಳಕೆಗೆ ಸರ್ಕಾರ ಹೊರಡಿಸಿರುವ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆಗ್ರಹಿಸಿದರು.
ನಿಯಮ ಉಲ್ಲಂಸುವ ಅಂಗಡಿಗಳ ಮಾಲೀಕರಿಗೆ 11 ಸಾವಿರ ರೂ.ವರೆಗೆ ದಂಡ ವಿಸಲು ಅವಕಾಶವಿದೆ. ಆದರೆ ಜಿಲ್ಲಾಡಳಿತ ತಳೆದಿರುವ ನಿರ್ಲಕ್ಷದಿಂದಾಗಿ ಬಹುತೇಕರು ನಾಮಲಕದಲ್ಲಿ ಕನ್ನಡ ಬಳಕೆ ಮಾಡುವುದನ್ನು ಬಿಟ್ಟಿದ್ಧಾರೆ. ಕೂಡಲೇ ನ.1ರೊಳಗೆ ಎಲ್ಲ ವಾಣಿಜ್ಯ ಮಳಿಗೆಗಳು ಕನ್ನಡ ನಾಮಲಕ ಹಾಕಲು ಅದೇಶಿಸಬೇಕು.
ನವೆಂಬರ್ ತಿಂಗಳಲ್ಲಿ ಎಲ್ಲ ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಕನ್ನಡ ಚಲನಚಿತ್ರ ಪ್ರದರ್ಶನ ಮಾಡಬೇಕು. ಇಲ್ಲವಾದಲ್ಲಿ ಅನ್ಯ ಭಾಷೆಯ ನಾಮಲಕ್ಕೆ ಕಪ್ಪು ಮಸಿ ಬಳಿಯುವ ಹಾಗೂ ಚಲನಚಿತ್ರ ಮಂದಿರ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಕೊಂಡಪ್ಪ, ಪದಾಕಾರಿಗಳಾದ ವೀರೇಶ, ನವೀನ್, ತಿಮ್ಮಪ್ಪ, ರಾಜಶೇಖರ, ವಿನೋದ, ಮಹೇಶ, ಶ್ರೀನಿವಾಸ, ಹನುಮಂತ ಪಾಲ್ಗೊಂಡಿದ್ದರು.