ನ್ಯಾಮತಿ: ಗೃಹಲಕ್ಷ್ಮೀ ಯೋಜನೆಯ ಅರ್ಜಿ ನೋಂದಣಿ ಕುರಿತು ಕುಂದು ಕೊರತೆ, ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತಂದಲ್ಲಿ ಪರಿಹರಿಸಲಾಗುವುದು ಎಂದು ಶಾಸಕ ಡಿ.ಜಿ. ಶಾಂತನಗೌಡ ಸಾರ್ವಜನಿಕರಿಗೆ ಹೇಳಿದರು.
ಪಟ್ಟಣ ಪಂಚಾಯಿತಿಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಗೆ ಗುರುವಾರ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿ ನೋಂದಣಿ ವಿಚಾರದಲ್ಲಿ ಗೊಂದಲ ಬೇಡ ಎಂದರು.
ಇದಕ್ಕೂ ಮೊದಲು ಗೃಹಲಕ್ಷ್ಮೀ ಯೋಜನೆಯ ಅರ್ಜಿ ಪ್ರಕ್ರಿಯೆ ಬಗ್ಗೆ ಪಪಂ ಮುಖ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ರಸ್ತೆ, ಅಂಬೇಡ್ಕರ್ ರಸ್ತೆ, ವಾಲ್ಮಿಕಿ ರಸ್ತೆ, ಕುಂಬಾರ ಬೀದಿಗಳಲ್ಲಿ ನಡೆಯುತ್ತಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು ಗಮನ ಹರಿಸುವಂತೆ ಸ್ಥಳೀಯರು ಶಾಸಕರಿಗೆ ಮನವಿ ಮಾಡಿದರು.
ಪಪಂ ಮುಖ್ಯಾಧಿಕಾರಿ ಪಿ. ಗಣೇಶ್ ರಾವ್, ಮಾಜಿ ಶಾಸಕ ಡಿ.ಬಿ. ಗಂಗಪ್ಪ, ಗುಂಡೋರರ ಲೋಕೇಶ್, ವನಜಾಕ್ಷಮ್ಮ, ಕೋಡಿಕೊಪ್ಪ ಶಿವಪ್ಪ, ಪೂಜಾರ್ ಚಂದ್ರಶೇಖರ್, ಹೊಸಮನೆ ಮಲ್ಲಿಕಾರ್ಜುನ್ ಕುಂಬಾರ್, ಮೇಘರಾಜ್ ಕೋಟಿಕೇರಿ, ಜೋಗದರ ಸುರೇಶ್ ಇತರರು ಇದ್ದರು.