ಜಿಲ್ಲೆ

ಮನೆ ಹಾನಿಗೊಳಗಾದ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ

ಉತ್ತರ ಕನ್ನಡ ಡೆಸ್ಕ್

ಸಿದ್ದಾಪುರ: ಕಾಂಗ್ರೆಸ್ ಸರ್ಕಾರ ನೊಂದವರ ಹಾಗೂ ಬಡವರ ಪರವಾಗಿದೆ. ರಾಜ್ಯ ಸರ್ಕಾರದ ಯೋಜನೆಗಳು ಅರ್ಹ ಎಲ್ಲ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಎಲ್ಲ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಮಾಡಬೇಕು ಎಂದು ಶಾಸಕ ಭೀಮಣ್ಣ ಟಿ. ನಾಯ್ಕ ಹೇಳಿದರು.

ಗಾಳಿ-ಮಳೆಯಿಂದ ಮನೆ ಕಳೆದುಕೊಂಡ ಸಂಸತ್ರರಿಗೆ ಪಟ್ಟಣದ ಆಡಳಿತ ಸೌಧದಲ್ಲಿ ಶುಕ್ರವಾರ ಪರಿಹಾರದ ಆದೇಶಪತ್ರ ವಿತರಿಸಿ ಅವರು ಮಾತನಾಡಿದರು.

ಈಗಾಗಲೇ ರಾಜ್ಯ ಸರ್ಕಾರ ಹಣವನ್ನು ತಹಸೀಲ್ದಾರ್ ಅವರ ಖಾತೆಗೆ ಜಮೆ ಮಾಡಿದ್ದು, ಹಂತ ಹಂತವಾಗಿ ಸಂತ್ರಸ್ತರ ಖಾತೆಗೆ ಜಮೆ ಮಾಡಲಾಗುತ್ತದೆ. ತಾಲೂಕಿನಲ್ಲಿ ಇಲ್ಲಿಯವರೆಗೆ ಈ ವರ್ಷದ ಮಳೆಯಿಂದಾಗಿ ಒಂದು ಮನೆ ಸಂಪೂರ್ಣವಾಗಿ ಹಾನಿ ಆಗಿದೆ. 3 ಮನೆಗಳಿಗೆ ತೀವ್ರ ಹಾನಿ ಹಾಗೂ 23 ಮನೆ ಭಾಗಶಃ ಹಾನಿ ಆಗಿದೆ ಎಂದರು.


ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಪಿಐ ಕುಮಾರ ಕೆ, ಪ್ರಮುಖರಾದ ಕೆ.ಜಿ. ನಾಗರಾಜ, ಸೀಮಾ ಎಂ. ಹೆಗಡೆ, ವಿ.ಎನ್. ನಾಯ್ಕ, ವಿವೇಕ ಭಟ್ಟ ಇತರರಿದ್ದರು.