ಹಾಸನ: ಯುಐಪಾತ್ ಎಂಬ ಕಂಪನಿ ನಡೆಸುವ ಯುಐಪಾತ್ ಸರ್ಟಿಫೈಡ್ ಪ್ರೋಫೆಷನಲ್ - ಆಟೋಮೇಷನ್ ಡೆವಲಪರ್ ಅಸೋಸಿಯೇಟ್ ಸರ್ಟಿಫಿಕೇಷನ್ ಪರೀಕ್ಷೆಯಲ್ಲಿ ನಗರದ ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ 21 ವಿದ್ಯಾರ್ಥಿಗಳು ಉತ್ತೀರ್ಣರಾದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದ ವೃತ್ತಿಪರ ಪ್ರಮಾಣ ಪತ್ರ ಪಡೆದರು.
ಇದೇ ಮೊದಲ ಬಾರಿಗೆ 21 ವಿದ್ಯಾರ್ಥಿಗಳು ಏಕ ಕಾಲದಲ್ಲಿ ಉತ್ತೀರ್ಣರಾಗಿರುವುದು ಕರ್ನಾಟಕದಲ್ಲಿಯೇ ಮೊದಲು. ಈ ಪ್ರಮಾಣಪತ್ರ ಪಡೆಯುವುದರಿಂದ ಭಾರತದಲ್ಲಿ ಅಲ್ಲದೆ ವಿಶ್ವದಾದ್ಯಂತ ಉತ್ತಮ ಶ್ರೇಣಿಯ ಉದ್ಯೋಗಾವಕಾಶ ದೊರೆಯಲಿದೆ. ಇಂತಹ ಸಾಧನೆ ಮಾಡಲು ಕಾಲೇಜಿನ ಆಡಳಿತ ಮಂಡಳಿ ಬೆಂಬಲ ಹಾಗೂ ಐಸಿಟಿ ಅಕಾಡೆಮಿ ಸಹಯೋಗ ಕಾರಣವಾಗಿದೆ.
ತಾಂತ್ರಿಕವಾಗಿ ಸಮರ್ಥರು, ಉದ್ಯಮಶೀಲ ವೃತ್ತಿಪರರನ್ನು ಬೆಳೆಸುವ ನಿಟ್ಟಿನಲ್ಲಿ ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ ಧ್ಯೇಯ ಈ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. ಸಾಧನೆಗೈದ ವಿದ್ಯಾರ್ಥಿಗಳನ್ನು ರಾಜೀವ್ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಡಾ.ರಚನಾ ರಾಜೀವ್, ಉಪಾಧ್ಯಕ್ಷ ಡಾ. ರಂಜಿತ್ ರಾಜೀವ್, ಕಾರ್ಯದರ್ಶಿ ಡಾ. ಬಿ.ಎನ್.ರತ್ನಾ, ಪ್ರಾಂಶುಪಾಲ ಡಾ. ಪಿ.ಕೆ.ಮಹೇಶ್, ಕಾರ್ಯಕ್ರಮದ ಸಂಯೋಜಕ ಪಿ.ಹನೋಕ್ ಅಭಿನಂದಿಸಿದ್ದಾರೆ.