ಕೂಡ್ಲಿಗಿ ಪಟ್ಟಣದ ಮೂರನೇ ವಾರ್ಡಿನಲ್ಲಿ ಫಾರ್ಮ್ ನಂ-3 ಮೇಳದಲ್ಲಿ ಖಾತೆದಾರರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹಕ್ಕುಪತ್ರ ನೀಡಿದರು. ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ಶುಕೂರ್, ಸದಸ್ಯರಾದ ಟಿ.ವೆಂಕಟೇಶ, ಕೆ.ಈಶಪ್ಪ, ಬಾಸೂ ನಾಯ್ಕ, ಪೂರ್ಯಾ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನ ಗೌಡ, ಪ್ರಮುಖರಾದ ಉದಯ ಜನ್ನು, ಢಾಣಿ ರಾಘವೇಂದ್ರ, ಹಡಗಲಿ ವೀರಭದ್ರಪ್ಪ, ಗುಂಡಪ್ಪ ಇತರರಿದ್ದರು.  
ಜಿಲ್ಲೆ

ಇದ್ದಲ್ಲಿಯೇ ಫಾರ್ಮ್ ನಂ-3 ವಿತರಣೆ - ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿಕೆ

ಶ್ರೀನಾಥ

ಕೂಡ್ಲಿಗಿ: ಸರ್ಕಾರದ ಅನೇಕ ಮಹತ್ವಾಕಾಂಕ್ಷೆ ಯೋಜನೆಗಳು ಆರ್ಥಿಕವಾಗಿ ಹಿಂದುಳಿದವರ ಪರವಾಗಿವೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಮೂರನೇ ವಾರ್ಡಿನ ಬಸವಲಿಂಗೇಶ್ವರ ದೇವಸ್ಥಾನದ ಬಳಿ ಪಪಂ ಕಚೇರಿಯಿಂದ ಆಯೋಜಿಸಿದ್ದ ಫಾರ್ಮ್ ನಂ-3 ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜದಲ್ಲಿ ತುಳಿತಕ್ಕೊಳಗಾದ ಜನರನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮೇಲೆತ್ತುವ ಕಾರ್ಯಕ್ರಮ ರೂಪಿಸಿದ್ದಾರೆ. ಅದರಂತೆ ಪಟ್ಟಣದ 20 ವಾರ್ಡ್‌ಗಳ ಜನರಿಗೆ ಅವಶ್ಯವಿರುವ ಫಾರ್ಮ್-3 ಇದ್ದ ಸ್ಥಳದಲ್ಲೇ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲರೂ ಈ ಯೋಜನೆಯ ಸದುಪಯೋಗ ಪಡೆದು ಕಚೇರಿಗಳಿಗೆ ವೃಥಾ ಅಲೆದಾಡದಿರಿ ಎಂದು ತಿಳಿಸಿದರು.