ಹುಬ್ಬಳ್ಳಿ: ಬೆಂಗಳೂರಿನ ಇಸ್ರೋ ಕಂಟ್ರೋಲ್ ರೂಂ ನಲ್ಲಿ ಚಂದ್ರಯಾನ- 3 ಮಿಷನ್ ಯಶಸ್ವಿಗೊಳಿಸಿದ ವಿಜ್ಞಾನಿಗಳ ತಂಡವನ್ನು ಸಭಾಪತಿ ಬಸವರಾಜ ಹೊರಟ್ಟಿ ಗೌರವಿಸಿದರು.
ಇಸ್ರೋ ವಿಜ್ಞಾನಿಗಳ ಪರಿಶ್ರಮವನ್ನು ಹೊರಟ್ಟಿ ಕೊಂಡಾಡಿದರು.
ಇಸ್ರೋ ಅಧ್ಯ ಎಸ್. ಸೋಮನಾಥ, ನಿರ್ದೇಶಕರಾದ ಎಂ. ಶಂಕರನ್, ಯೋಜನಾ ನಿರ್ದೇಶಕ ಪಿ. ವೀರಮುತ್ತು ವೇಲು, ಮಿಷನ್ ನಿರ್ದೇಶಕ ಎಸ್. ಮೋಹನಕುಮಾರ, ನಿರ್ದೇಶಕರಾದ ಎಸ್. ಉನ್ನೀ ಕೃಷ್ಣನ್ ನಾಯರ್, ವಿ. ರಾಜನ್. ನಿಲೇಶ ದೇಸಾಯಿ, ಕೆ.ಜಿ. ಶಿವಾನಿ ಇತರರು ಇದ್ದರು.