ಹನುಮಸಾಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಬಳಿ ಚಂದ್ರಯಾನ- 3 ಯಶಸ್ವಿ ಆಗಿದ್ದಕ್ಕೆ ವಿಜಯೋತ್ಸವ ಆಚರಣೆಯಲ್ಲಿ ಬಿಜೆಪಿ ತಾಲ್ಲೂಕಾಧ್ಯಕ್ಷ ಬಸವರಾಜ ಹಳ್ಳೂರು, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಪ್ರಮುಖರಾದ ಮಹಾಂತೇಶ ಅಗಸಿಮುಂದಿನ, ಸೂಚಪ್ಪ ದೇವರಮನಿ, ಮರೇಗೌಡ ಬೋದೂರು, ಡಾ.ಬಸವರಾಜ ಹಕ್ಕಿ, ಶಿವಪುತ್ರಪ್ಪ ಕೋಳೂರ, ರಮೇಶ ಬಡಿಗೇರ, ವೀರೇಶ ಈಳಗೇರ, ನಾಗರಾಜ್ ಕಂದಗಲ್, ಮಂಜುನಾಥ ಶಿರೋಳ, ಭೀಮೇಶ ಮೂಲಿಮನಿ, ವಿಜಯ ಕುಷ್ಟಗಿ ಇತರರಿದ್ದರು. 
ಜಿಲ್ಲೆ

ಇಸ್ರೋ ವಿಜ್ಞಾನಿಗಳ ಕಾರ್ಯ ಶ್ಲಾಘನೀಯ

ಪ್ರವೀಣ ಉದುಸಾ ದಲಬಂಜನ್

ಹನುಮಸಾಗರ: ಚಂದ್ರಯಾನ-3 ಯಶಸ್ವಿಗೊಳಿಸುವ ಮೂಲಕ ಇಸ್ರೋ ಭಾರತದ ಹಿರಿಮೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದೆ ಎಂದು ಬಿಜೆಪಿ ತಾಲ್ಲೂಕಾಧ್ಯಕ್ಷ ಬಸವರಾಜ ಹಳ್ಳೂರು ಹೇಳಿದರು.

ಸಂಶೋಧನಾ ಕ್ಷೇತ್ರದಲ್ಲಿ ಭಾರತ ವಿಶ್ವ ಗುರು

ಪಟ್ಟಣದ ಅಂಬೇಡ್ಕರ್ ಸರ್ಕಲ್ನಲ್ಲಿ ಚಂದ್ರಯಾನ - 3 ಯಶಸ್ವಿಯಾದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಮಾತನಾಡಿದರು. ಚಂದ್ರನ ಅಂಗಳದಲ್ಲಿ ದಕ್ಷಿಣ ದ್ರುವಕ್ಕೆ ಪ್ರಥಮವಾಗಿ ಲ್ಯಾಂಡರ್(ವಿಕ್ರಮ್) ಯಶಸ್ವಿಯಾಗಿ ಇಳಿದಿರುವುದು ಸಂಶೋಧನಾ ಕ್ಷೇತ್ರದ ಸಾಧನೆ ಮತ್ತಷ್ಟು ಹೆಚ್ಚಿದೆ. ಇದರಿಂದಾಗಿ ಭಾರತ ವಿಶ್ವ ಗುರು ಎಂದು ಗುರುತಿಸಿಕೊಂಡಿದೆ. ಚಂದ್ರಯಾನ-3 ಯಶಸ್ವಿಗೊಳಿಸುವಲ್ಲಿ ಇಸ್ರೋ ವಿಜ್ಞಾನಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಚಂದ್ರಯಾನ-3 ವಿಜಯೋತ್ಸವ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಪ್ರಮುಖರಾದ ಮಹಾಂತೇಶ ಅಗಸಿಮುಂದಿನ, ಸೂಚಪ್ಪ ದೇವರಮನಿ, ಮರೇಗೌಡ ಬೋದೂರು, ಡಾ.ಬಸವರಾಜ ಹಕ್ಕಿ, ಶಿವಪುತ್ರಪ್ಪ ಕೋಳೂರ, ರಮೇಶ ಬಡಿಗೇರ, ವೀರೇಶ ಈಳಗೇರ