ರಾಣೆಬೆನ್ನೂರ: ಇಟ್ಟಿಗೆ ಭಟ್ಟಿ ಬಳಿ ಇಸ್ಪೀಟ್ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಓರ್ವನನ್ನು ಬಂಧಿಸಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ತಾಲೂಕಿನ ಮಾಕನೂರ ಕ್ರಾಸ್ ಬಳಿ ಗುರುವಾರ ನಡೆದಿದೆ.
ತಾಲೂಕಿನ ವಡೇರಾಯನಹಳ್ಳಿ ನಿವಾಸಿ ಕರಬಸಪ್ಪ ಚನ್ನಬಸಪ್ಪ ಗೌಡರ (32) ಬಂಧಿತ ಆರೋಪಿ. ಇನ್ನೂ 7 ಜನ ತಲೆಮರಿಸಿಕೊಂಡಿದ್ದಾರೆ.
ಇವರು ಮಾಕನೂರ ಕ್ರಾಸ್ ಬಳಿ ಇಟ್ಟಿಗೆ ಭಟ್ಟಿಯಲ್ಲಿ ಇಸ್ಪೀಟ್ ಆಟವಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಮಾರಪಟ್ಟಣ ಠಾಣೆ ಪಿಎಸ್ಐ ಪ್ರವಿಣಕುಮಾರ ಒಬ್ಬನನ್ನು ಬಂಧಿಸಿದ್ದಾರೆ. ಇನ್ನೂಳಿದವರು ಓಡಿ ಹೋಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.