ಜಿಲ್ಲೆ

ಇಸ್ಪೀಟ್​ ಅಡ್ಡೆ ಮೇಲೆ ದಾಳಿ; 1.71 ಲಕ್ಷ ರೂ. ಜಪ್ತಿ

Haveri - Kariyappa Aralikatti

ರಾಣೆಬೆನ್ನೂರ: ಜಮೀನಿನಲ್ಲಿ ಅಂದರ್​&ಬಾಹರ್​ ಇಸ್ಪೀಟ್​ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಬರೋಬ್ಬರಿ 1.71 ಲಕ್ಷ ರೂ. ಜಪ್ತಿ ಮಾಡಿ 13 ಜನರ ವಿರುದ್ಧ ಎ್​ಐಆರ್​ ದಾಖಲಿಸಿದ ಟನೆ ತಾಲೂಕಿನ ಮಾಕನೂರ ಕ್ರಾಸ್​ ಬಳಿ ಭಾನುವಾರ ರಾತ್ರಿ ನಡೆದಿದೆ.

ಆರೋಪಿಗಳಾದ ಅಷ್ಟಮೂತಿರ್ ಅಶೋಕಪ್ಪ ಓಲೇಕಾರ, ಹನುಮಂತಪ್ಪ ಈರಪ್ಪ ಹೊನ್ನಪ್ಪನವರ, ಕರಬಸಪ್ಪ ಮಲ್ಲೇಶಪ್ಪ ಕಂಬಳಿ, ಹನುಮಂತಪ್ಪ ಹಳ್ಳಳೆಪ್ಪನವರ, ಗಣೇಶ ಹಿತ್ತಲಮನಿ ಸೇರಿ 13 ಜನರ ವಿರುದ್ಧ ಪ್ರಕರಣ ದಾಖಲಾಗಿರುವುದು.

ಇವರು ಮಾಕನೂರು ಕ್ರಾಸ್​ ಬಳಿ ಜಮೀನುವೊಂದರಲ್ಲಿ ಅಂದರ್​&-ಬಾಹರ್​ ಇಸ್ಪೀಟ್​ ಆಟವಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಕುಮಾರಪಟ್ಟಣ ಠಾಣೆ ಪಿಎಸ್​ಐ ಸಂಗೀತಾ ದೊಡ್ಡಮನಿ ಹಾಗೂ ತಂಡದವರು ದಾಳಿ ಮಾಡಿ 1.71 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕುಮಾರಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.