ಜಿಲ್ಲೆ

ಹೆರಿಟೇಜ್ ಫೆಸ್ಟ್ ಬಹುಮಾನ ವಿತರಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಹುಬ್ಬಳ್ಳಿ ಧಾರವಾಡ ಇಸ್ಕಾನ್ ವತಿಯಿಂದ ಏರ್ಪಡಿಸಿದ್ದ ಹೆರಿಟೇಜ್ ಫೆಸ್ಟ್ ನಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಮಂಗಳವಾರ ನಡೆಯಿತು.

ಉತ್ತಮ ಪ್ರದರ್ಶನಕ್ಕಾಗಿ ಧಾರವಾಡದ ಎಸ್ ಡಿಎಂ ಸೆಂಟ್ರಲ್ ಸ್ಕೂಲ್‌ಗೆ ಮೊದಲ ಬಹುಮಾನ (ರೋಲಿಂಗ್ ಟ್ರೋಫಿ) ನೀಡಲಾಯಿತು. ರನ್ನರ್ ಅಪ್ ಟ್ರೋಫಿಯನ್ನು ಹುಬ್ಬಳ್ಳಿಯ ಬೆನಕ ವಿದ್ಯಾ ಮಂದಿರ ಹಾಗೂ ಡಿಕೆ ಪಬ್ಲಿಕ್ ಸ್ಕೂಲ್‌ಗೆ ನೀಡಲಾಯಿತು. ತರಬೇತಿ ನೀಡಿದ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಲಾಯಿತು.

ಸುಮಾರು 450 ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು. ಭಾರತೀಯ ಸಂಪ್ರದಾಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 25 ಸ್ಪರ್ಧೆಗಳನ್ನು ನಡೆಸಲಾಯಿತು. ಫೆಸ್ಟ್ ನಲ್ಲಿ ಎಲ್ ಕೆಜಿ ಯಿಂದ ಹಿಡಿದು 10ನೇ ತರಗತಿವರೆಗೆ 8500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ಐದು ದಿನಗಳವರೆಗೆ ನಡೆದ ಅತಿದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿದೆ. ನಾಟಕ, ನೃತ್ಯ, ರಂಗೋಲಿ, ಸಂಗೀತ, ಪೇಂಟಿಂಗ್ ಮುಂತಾದ ಸ್ಪರ್ಧೆಗಳು ನಡೆದವು.

ಹೆರಿಟೇಜ್ ಫೆಸ್ಟ್ ಟೈಟಲ್ ಸ್ಪಾನ್ಸರ್ ಸ್ವರ್ಣ ಗ್ರುಪ್ ನ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ನಂದು ಕೆಮಿಕಲ್ಸ್ ನ ಉಷಾ ಹೆಗಡೆ, ಜಿ.ಕೆ. ರೆಡ್ಡಿ, ಪಿ.ಎಚ್. ನೀರಲಕೇರಿ ಅವರು ಪ್ರಶಸ್ತಿ ವಿತರಣೆ ಮಾಡಿದರು.