ಹೂವಿನಹಡಗಲಿ: ತಾಲೂಕಿನ ಮಿರಾಕೊರ‌್ನಹಳ್ಳಿಯ ಈಶ್ವರಿದೇವಿಯ ಜಾತ್ರಾಮಹೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು. ಗ್ರಾಮದ ದೇವಸ್ಥಾನದಿಂದ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಆರಂಭವಾಯಿತು.
ಗ್ರಾಮ ಹೊರವಲಯದ ಆಲದ ಮರದ ಬಳಿ ಪ್ರತಿಷ್ಠಾಪಿಸಿ ಗ್ರಾಮಸ್ಥರಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಸಕಲ ಮಂಗಳ ವಾದ್ಯಗಳಾದ ಸಮಾಳ, ನಂದಿಕೋಲು, ಡೊಳ್ಳುಕುಣಿತಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬಳಿಕ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ರಾತ್ರಿ ಗ್ರಾಮದಲ್ಲಿ ಸಿಡಿಮದ್ದು ಸುಡಲಾಯಿತು.
ಬಿ.ವಿ.ಈಶ ಕಲಾಬಳಗದಿಂದ ‘ಸಾವು ತಂದ ಸೌಭಾಗ್ಯ’ ನಾಟಕ ಪ್ರದರ್ಶನಗೊಂಡಿತು.