ಜಿಲ್ಲೆ

ಈಶ್ವರಿ ಫೌಂಡೇಷನ್ ನಿಂದ ಬಣ್ಣದರ್ಪಣಕ್ಕೆ ಚಾಲನೆ

Dharwada - Basavaraj Idli

ಹುಬ್ಬಳ್ಳಿ: ಧಾರವಾಡ ತಾಲೂಕಿನ ಹೆಬ್ಬಳ್ಳಿ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಗೆ ನಗರದ ಈಶ್ವರಿ ಫೌಂಡೇಷನ್ ವತಿಯಿಂದ ಬಣ್ಣದರ್ಪಣ ಕಾರ್ಯಕ್ರಮ ನಡೆಯಿತು.

ಫೌಂಡೇಷನ್ ಅಧ್ಯಕ್ಷ ಸಂತೋಷ ವರ್ಣೇಕರ ಬಣ್ಣದರ್ಪಣ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸದಾ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಫೌಂಡೇಷನ್ ಜನರಿಗೆ ನೆರವಾಗುತ್ತಿದೆ. ಭವಿಷ್ಯದ ಪ್ರಜೆಗಳು ತಯಾರಾಗುವ ಶಾಲೆ ಅಂದ ಚೆಂದವಾಗಿ ಕಾಣಬೇಕು. ಅದಕ್ಕಾಗಿ ಈ ಕಾರ್ಯ ಮಾಡುತ್ತಿರುವುದಾಗಿ ಅವರು ತಿಳಿಸಿದರು.

ಕೊಪ್ಪಳ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಪವರ್ ಆಫ್ ಯೂಥ್ಸ ಫೌಂಡೇಷನ್ ಅಧ್ಯಕ್ಷ ರವಿಚಂದ್ರ ದೊಡ್ಡಿಹಾಳ, ಶ್ರೀನಿವಾಸ ವಾಲಿಕಾರ, ಶಿಕ್ಷಕ ಸಾಹಿತಿ ಎಲ್.ಐ. ಲಕ್ಕಮ್ಮನವರ, ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಬಿಮಕ್ಕನವರ, ಸುರೇಶ ಬಣ್ಣಿಗಿಡದ, ವಿಠ್ಠಲ ಭೋವಿ, ಕೃಷ್ಣ ನಾಡಿಗೆರ, ಊರಿನ -ಹಿರಿಯರು, ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.

ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.