ಜಿಲ್ಲೆ

ಅಷ್ಟ ಭುಜ ಈಶ್ವರ ದೇವಸ್ಥಾನ ಲೋಕಾರ್ಪಣೆ.

Gadag - Shivanand Hiremath

ಗದಗ ನಗರದ ಸಂಭಾಪೂರ ರಸ್ತೆಯಲ್ಲಿರುವ ಕೇಶವ ಪಾರ್ಕನಲ್ಲಿ‌ ನೂತನವಾಗಿ ನಿರ್ಮಿಸಲಾಗಿರುವ ಅಷ್ಟಭುಜ ಈಶ್ವರ ದೇವಸ್ಥಾನದ ಲೋಕಾರ್ಪಣೆ, ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಬುಧವಾರ ಬೆಳಗ್ಗೆ ಅಡ್ನೂರ ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ, ಶುಂಭುಲಿಂಗ ಶಾಸ್ತ್ರೀಗಳಿಂದ ವಿಶೇಷ ಪೂಜೆಗಳ ಮೂಲಕ ಜರುಗಿತು. ಧರ್ಮಸಭೆಯ ಅಧ್ಯಕ್ಷತೆಯನ್ನು ಅಡ್ನೂರ ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ವಹಿಸಿದ್ದರು. ನೇತೃತ್ವವನ್ನು ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಬೆಳಹೋಡದ ಪರಿಪೂರ್ಣಾನಂದ ಭಾರತಿ ಶ್ರೀಗಳು ವಹಿಸಿದ್ದರು. ಅತಿಥಿಗಳಾಗಿ ಜಿಪಂ ಮಾಜಿ ಅಧ್ಯಕ ಸಿದ್ಧಲಿಂಗೇಶ್ವರ ಪಾಟೀಲ, ನಗರಸಭೆ ಸದಸ್ಯೆ ಲಲಿತಾ‌ ಅಸೂಟಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ಬಿ.ಅಸೂಟಿ, ಮಹೇಶ ಗಾಣಿಗೇರ, ಮಂಜುನಾಥ ಬರದೂರ, ಆರ್.ಜೆ.ಸಾಹುಕಾರ, ಸುಭಾಸಪ್ಪ ಕೊಟಗಿ, ಮಧುಸೂಧನ ಪುಣೇಕರ, ಸುರೇಶ ಶೆಟ್ಟರ, ಜಿ.ಎಂ.ಶೆಟ್ಟರ, ಅಶೋಕ ಮಾನ್ವಿ ಶಿವಕುಮಾರ ಕುಷ್ಟಗಿ ಸೇರಿದಂತೆ ಬಡಾವಣೆಯ ಹಿರಿಯರು, ಅಕ್ಕ ಪಕ್ಕದ ಬಡಾವಣೆಯ ನಿವಾಸಿಗಳು ಪಾಲ್ಗೊಂಡಿದ್ದರು, ಮಕ್ಕಳಿಂದ‌ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.