ಜಿಲ್ಲೆ

ಮಾಗಡಿಯಲ್ಲಿ ಇಷ್ಟಾರ್ಥ ಸಿದ್ಧಿ ವಿನಾಯಕ ರಥೋತ್ಸವ ಅದ್ದೂರಿ

ಪ್ರಥಮ ಪೂಜೆಗೆ ಬಾರದ ಮುಜರಾಯಿ ಇಲಾಖೆ ಅಧಿಕಾರಿಗಳು

ಮಾಗಡಿ: ತಾಲೂಕಿನ ಪ್ರಸಿದ್ಧ ಇಷ್ಟಾರ್ಥ ಸಿದ್ಧಿ ಶ್ರೀವಿನಾಯಕ ಸ್ವಾಮಿಯ 14ನೇ ವರ್ಷದ ಬ್ರಹ್ಮರಥೋತ್ಸವ ಮಂಗಳವಾರ ಅಪಾರ ಭಕ್ತರ ಸಮೂಹದ ನಡುವೆ ವಿಜೃಂಭಣೆಯಿಂದ ನೆರವೇರಿತು.

ಬ್ರಹ್ಮರಥೋತ್ಸವಕ್ಕೆ ಬಳಗೆರೆ ಆಶ್ರಮದ ಸೌಭಾಗ್ಯ ಯಜ್ಞಾನಂದ ಗುರೂಜಿ ಪ್ರಥಮ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ದೇವಾಲಯದಲ್ಲಿ ಹೋಮ, ಹವನ, ಸಂಕಲ್ಪ ಸೇರಿ ವಿಶೇಷ ಪೂಜೆ, ಹೂವಿನ

ಅಲಂಕಾರ, ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ನೂರಾರು ತೆಂಗಿನ ಕಾಯಿ ಒಡೆದು, ಅರಿಶಿಣ, ಅಕ್ಷತೆ ಜತೆ ಒಂದು ರೂಪಾಯಿಗಳ ನಾಣ್ಯಗಳನ್ನು ಭಕ್ತರು ಪಡೆದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಸೀರೆ ನೇಕಾರಿಕೆ ಮಾಡುವ ಮಂದಿ ಪೂಜೆ ಸಲ್ಲಿಸದೆ ರ್ನಿಲ್ಯಸಿದರೆ ಸೀರೆ ನೇಕಾರಿಕೆ ಮಾಡುವ ಸಮಯದಲ್ಲಿ ಸೀರೆ ಬಟ್ಟೆಯನ್ನು ಇಲಿ ಕಡಿಯುತ್ತದೆ ಎಂಬ ನಂಬಿಕೆ ಇಂದಿಗೂ ಇದ್ದು, ದೇವಾಂಗ ಸಮುದಾಯದವರು ಬ್ರಹ್ಮರಥೋತ್ಸವದ ವೇಳೆ ಆಗಮಿಸಿ ಭಜನೆ ನಡೆಸಿಕೊಡುವರು. ವಿಶೇಷ ಪೂಜೆ ಸಲ್ಲಿಸಿದ ನಂತರ ಗ್ರಾಮದ ಹೊರ ಭಾಗದಲ್ಲಿ ಪ್ರಸಾದ ಹಂಚುವುದು ಹಿಂದಿನಿಂದ ನಡೆದುಕೊಂಡು ಬಂದಿರುವುದು ಮತ್ತೊಂದು ವಿಶೇಷವಾಗಿದೆ.

ಗ್ರಾಮದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಕಿತ್ತಾಡಿಕೊಂಡು ವೈಷಮ್ಯ ಸಾಧಿಸುತ್ತಿದ್ದರೆ ಅಂತಹವನ್ನು ಗ್ರಾಮದ ಹಿರಿಯರು ದೇವಾಲಯಕ್ಕೆ ಕರೆಸಿ ನ್ಯಾಯ ಪಂಚಾಯಿತಿ ಮಾಡಿಸಿ ಒಂದುಗೂಡಿಸುವ ಸಂಪ್ರದಾಯ ಇಂದಿಗೂ ಇದೆ.

ನೇತೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್​ ಮಾತನಾಡಿ, ಸಂಕಷ್ಟ ಪರಿಹರಿಸುವಂತೆ ದೇವಾಲಯಕ್ಕೆ ಬಂದು ಭಕ್ತಿಯಿಂದ ಬೇಡಿಕೊಂಡರೆ ಸಂಕಷ್ಟ ದೂರವಾಗುತ್ತದೆ ಎಂದರು.

ದೇವಾಲಯದಿಂದ ಮುಜುರಾಯಿ ಇಲಾಖೆಗೆ ಹುಂಡಿ ಹಣಬರುತ್ತದೆ. ಈ ಹಣದಿಂದ ದೇವಾಲಯದ ಅಭಿವೃದ್ಧಿಗೆ ಒಂದು ನಯಾ ಪೈಸೆ ನೀಡಿಲ್ಲ. ದೇವಾಲಯ ಮೇಲ್ಭಾಗದ ಮೂರ್ತಿಗಳು ಹಾನಿಯಾಗಿವೆ ಹಾಗೂ ದೇವಾಲಯ ಚುರುಕಿಗಳನ್ನು ಸರಿಪಡಿಸಬೇಕಿದೆ. ದೇವಾಲಯ ಮುಂಭಾಗದ ಕಾಂಕ್ರೀಟ್​ ರಸ್ತೆ, ಕಾಂಪೌಂಡ್​ ನಿಮಾಣಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ, ನಿರಂತರ ಅನ್ನದಾಸೋಹ ನಡೆಯಿತು. ಆಂಜನ್​ ಗುರೂಜಿ, ಗ್ರಾಮದ ಮುಖಂಡರಾದ ಯಾಲಕಪ್ಪ, ಶ್ರೀನಿವಾಸ್​, ಆನಂದ್​, ನರಸಿಂಹಮೂರ್ತಿ, ಪ್ರಮೋದ್​, ಕೆಂಪೇಗೌಡ, ದಶರಥ, ಶಿವಣ್ಣ, ಪ್ರಕಾಶ್​, ತಿರುಮಲೆ ರಮೇಶ್​, ಆನಂದ್​, ಜಯರಾಮಣ್ಣ, ಕೃಷ್ಣಪ್ಪ, ಮಂಜುನಾಥ್​, ಕೋಟಿ ನಾಗರಾಜು, ನಿವೃತ್ತ ಪಿಡಿಒ ಲಕ್ಷಿ$್ಮನಾರಾಯಣ್​, ಬಾಲಕೃಷ್ಣ, ಶಿವಣ್ಣ, ಗಂಗಣ್ಣ, ವಿಜಯಕುಮಾರ್​, ಮಂಜುನಾಥ್​, ಕೆಇಬಿ ಕುಮಾರ್​, ಅರ್ಚಕ ಶ್ರೀನಿವಾಸ್​ ಇತರರು ಇದ್ದರು.

ಭಕ್ತರ ಬೇಸರದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ಹುಂಡಿಯ ಹಣ ಪಡೆಯುವ ಇಲಾಖೆ ಪ್ರತಿನಿಧಿಯಾಗಿ ತಹಸೀಲ್ದಾರ್​ ಪ್ರಥಮ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಈ ಬಾರಿಯ ಬ್ರಹ್ಮರಥೋತ್ಸವದಲ್ಲಿ ಯಾವ ಅಧಿಕಾರಿಗಳು ಪೂಜೆ ಸಲ್ಲಿಸಲಿಲ್ಲ, ಇದು ಭಕ್ತರ ಆಕ್ರೋಶಕ್ಕ ಕಾರಣವಾಯಿತು.