ವಿಜಯಪುರ ನಗರದ ಕಾಳಿಕಾ ನಗರದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ನಡೆದ ಒಂಬತ್ತನೇ ದಿನದ ಕಾರ್ಯಕ್ರಮದಲ್ಲಿ ಜೆಡಿಎಸ್​ ಮುಖಂಡ ಬಿ.ಡಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಮಧು ಕಲಾದಗಿ, ಹಣಮಂತ ಚಿಂಚಲಿ, ಅರವಿಂದ ಗೊಬ್ಬರ ಇತರರಿದ್ದರು. 
ಜಿಲ್ಲೆ

ದೇವಿ ಪೂಜೆಯಿಂದ ಇಷ್ಟಾರ್ಥ ಸಿದ್ಧಿ

ಗಿರೀಶ ಸಗರ

ವಿಜಯಪುರ : ಆದಿ ದೇವತೆ ದುರ್ಗಿಯನ್ನು ಒಂಬತ್ತು ದಿನ ಪೂಜಿಸುವ ಶರನ್ನವರಾತ್ರಿಯಂದು ದೇವಿಯನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಜೆಡಿಎಸ್​ ಮುಖಂಡ ಬಿ.ಡಿ. ಪಾಟೀಲ ಹೇಳಿದರು.

ನಗರದ ಕಾಳಿಕಾ ನಗರದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಶನಿವಾರ ಒಂಬತ್ತನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಧು ಕಲಾದಗಿ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಹಣಮಂತ ಚಿಂಚಲಿ, ಅರವಿಂದ ಗೊಬ್ಬರ, ಸುಭಾಷ ಕರಿಕಬ್ಬಿ, ಗುರುರಾಜ ಹಿರೇಮಠ, ರಮೇಶ ಬಾಲರೇಡ್ಡಿ, ಶಾಂತೇಗೌಡ ಪಾಟೀಲ, ಬಸವರಾಜ ಕಣಬೂರ, ಸುರೇಶ ಕಲಾದಗಿ, ವಿಜಯಕುಮಾರ ವಪ್ಪಾರಿ, ಶಿವಾನಂದ ಹಿರೇಕುರುಬರ, ಈರಣ್ಣ ಕಟಗೇರಿ, ಬಸವರಾಜ ಗೊಳಸಂಗಿಮಠ ಹಾಗೂ ಬಡಾವಣೆಯ ಭಕ್ತಾದಿಗಳು ಉಪಸ್ಥಿತರಿದ್ದರು.