ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿಯಲ್ಲಿ ಆ.13ರಂದು ಶ್ರಾವಣ ಮಾಸದ ವಿಶೇಷ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಬಿ.ಡಿ. ಪಲ್ಲೇದ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಭಾನುವಾರ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಬೆಳಗ್ಗೆ ಕೊಟ್ರೇಶ ಅಕ್ಕೂರ ಮನೆಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸುವರು. 10ಗಂಟೆಗೆ ಭವ್ಯ ಮೆರವಣಿಗೆಯೊಂದಿಗೆ ಶ್ರೀಗಳನ್ನು ಎಪಿಎಂಸಿ ಸಭಾಭವನಕ್ಕೆ ಕರೆತರಲಾಗುವುದು. ಅಲ್ಲಿ ಇಷ್ಟಲಿಂಗ ಪೂಜೆಯ ನೇತೃತ್ವ ವಹಿಸಲಿದ್ದಾರೆ ಎಂದರು.
ತಾಲೂಕು ಸಮಿತಿ ರಚಿಸಲಾಗಿದ್ದು, ಉಪಾಧ್ಯಕ್ಷರಾಗಿ ಚಂದ್ರು ಕೂಸ್ಲಾಪೂರ, ಸದಸ್ಯರಾಗಿ ಮಹೇಶ ವರವಿ, ಶಿವಪುತ್ರಪ್ಪ ನೆಲಗುಡ್ಡದ, ಶ್ರೀಕಾಂತ ಯಲಿಶಿರುಂದ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ನಂದಾ ಪ್ರಕಾಶ ಪಲ್ಲೇದ, ಯುವಘಟಕದ ಅಧ್ಯಕ್ಷರಾಗಿ ವಿಶ್ವನಾಥ ದಲಾಲಿ, ಕಾರ್ಯದರ್ಶಿಯಾಗಿ ನಾಗರಾಜ ಗಡ್ಡಿ, ರೈತ ಘಟಕದ ಅಧ್ಯಕ್ಷರಾಗಿ ವಸಂತಗೌಡ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಕೊಟ್ರೇಶ ಅಕ್ಕೂರ, ಬಸವರಾಜ ಸಾಲಿ, ಅಶೋಕ ಬಳ್ಳಾರಿ, ಕಾಶಣ್ಣ ಗಿಡ್ಡವೀರಪ್ಪನವರ, ಅಶೋಕ ವರವಿ, ಶೇಖರ ಹುಡೇದ, ಚನ್ನಬಸವನಗೌಡ ಪಾಟೀಲ, ಸುರೇಶ ವರವಿ, ಬಸವರಾಜ ಕಲ್ಯಾಣಿ, ಫಕೀರೇಶ ಕಲ್ಯಾಣಿ, ಚನ್ನಪ್ಪ ಕೊಡ್ಲಿವಾಡ, ದೇವರಾಜ ಮೇಟಿ, ಎಸ್.ಎಸ್. ಪಾಟೀಲ, ಸಿ.ಆರ್. ಪಾಟೀಲ, ಬಸವನಗೌಡ ಪಾಟೀಲ, ಚನ್ನವೀರಗೌಡ ತೆಗ್ಗಿನಮನಿ ಇತರರು ಉಪಸ್ಥಿತರಿದ್ದರು.