ಜಿಲ್ಲೆ

2ಎ ಮೀಸಲಾತಿಗಾಗಿ ಇಷ್ಟಲಿಂಗ ಪೂಜೆ

ಸೋಮನಾಥ ರೆಡ್ಡಿ

ಮುಂಡರಗಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಒತ್ತಾಯಿಸಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಇಷ್ಠಲಿಂಗ ಪೂಜೆ ಮೂಲಕ ಕೈಗೊಂಡ ಹೋರಾಟಕ್ಕೆ ಪಟ್ಟಣದ ಪಂಚಮಸಾಲಿ ಸಮುದಾಯದ ಹಲವರು ಬೆಂಬಲಿಸಿ ಕಿತ್ತೂರು ಚೆನ್ನಮ್ಮ ಸಮುದಾಯ ಭವನ ಜಾಗದಲ್ಲಿ ಇಷ್ಠಲಿಂಗ ಪೂಜೆ ನೆರವೇರಿಸಿದರು.

ತಾಲೂಕು ಪಂಚಮಸಾಲಿ ಸಮುದಾಯದ ಮಾಜಿ ಅಧ್ಯಕ್ಷ ಕೊಟ್ರಗೌಡ ಪಾಟೀಲ ಮಾತನಾಡಿ, 2ಎ ಮೀಸಲಾತಿ ಜಾರಿಗೆ ಒತ್ತಾಯಿಸಿ ಕೂಡಲಸಂಗಮ ಪಂಚಮಸಾಲಿ ಶ್ರೀಗಳು ಕೈಗೊಂಡಿರುವಂತ ಇಷ್ಠಲಿಂಗ ಪೂಜೆಗೆ ಬೆಂಬಲ ನೀಡಿದ್ದೇವೆ. ರಾಜ್ಯ ಸರ್ಕಾರ 2ಎ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಜಿ.ಪಂ ಮಾಜಿ ಸದಸ್ಯ ಶಿವಪ್ಪ ಅಂಕದ, ದೇವಪ್ಪ ಇಟಗಿ ಮಾತನಾಡಿದರು. ಶಿವಾನಂದ ಕಮತಾರ, ಈರಣ್ಣ ಹಕ್ಕಂಡಿ, ಶಿವಾನಂದ ನವಲಗುಂದ, ಶಿವಬಸಪ್ಪ ಬ್ಯಾಳಿ, ನಾಗರಾಜ ಮುರಡಿ, ಅಂದಪ್ಪ ಮಾರನಬಸರಿ, ಶ್ರೀಕಾಂತಗೌಡ ಪಾಟೀಲ, ಬಸವರಾಜ ಬಣಕಾರ, ರಮೇಶಗೌಡ ಪಾಟೀಲ, ಈರಣ್ಣ ಕಲ್ಲಳ್ಳಿ, ಆರ್.ಕೆ. ದೇಸಾಯಿ, ಹುಚ್ಚಪ್ಪ ಇಟಗಿ ಇತರರು ಇದ್ದರು.