ಜಿಲ್ಲೆ

ಆ.24ರಂದು ಗ್ರಾಮೋತ್ಸವ ರೂರಲ್​ ಪ್ರೀಮಿಯರ್​ ಲೀಗ್​

ಈಶ ಫೌಂಡೇಷನ್​ನಿಂದ ಕ್ರೀಡಾ ಉತ್ಸವ

ಸ್ವಯಂ ಸೇವಕ ಸಭ್ಯತ್​ ಶೆಟ್ಟಿ ಮಾಹಿತಿ

ಸೆ.21ರಂದು ಕೊಯಂಬತ್ತೂರಿನಲ್ಲಿ ಫೈನಲ್​

ವಿಜಯವಾಣಿ ಸುದ್ದಿಜಾಲ ಉಡುಪಿ

ಈಶ ಫೌಂಡೇಷನ್​ನಿಂದ ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾ ಉತ್ಸವದಫೈನಲ್​ ಪಂದ್ಯಗಳು ಸೆ.21ರಂದು ಕೊಯಂಬತ್ತೂರಿನಲ್ಲಿ ನಡೆಯಲಿದ್ದು ಪೂರ್ವಭಾವಿಯಾಗಿ ಆ.24ರಂದು ಉಡುಪಿಯ ಸೇಂಟ್​ ಸಿಸಿಲೀಸ್​ ಹೈಸ್ಕೂಲ್​ ಗ್ರೌಂಡ್​ನಲ್ಲಿ ಉಡುಪಿ ಜಿಲ್ಲಾ ಕ್ಲಸ್ಟರ್​ ಮಟ್ಟದ ಗ್ರಾಮೋತ್ಸವ ರೂರಲ್​ ಪ್ರೀಮಿಯರ್​ ಲೀಗ್​ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸ್ವಯಂ ಸೇವಕ ಸಭ್ಯತ್​ ಶೆಟ್ಟಿ ಮಾಹಿತಿ ನೀಡಿದರು.

ಉಡುಪಿಯ ಪತ್ರಿಕಾ ಭವನದಲ್ಲಿ ಆ.18ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರುಷರಿಗೆ ವಾಲಿಬಾಲ್​ ಹಾಗೂ ಮಹಿಳೆಯರಿಗೆ ಥ್ರೋ ಬಾಲ್​ ಪಂದ್ಯಾವಳಿ ನಡೆಯಲಿದೆ. ಗ್ರಾಮೀಣ ತಂಡಗಳಿಗೆ ಮಾತ್ರ ಅವಕಾಶವಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಈಗಾಗಲೇ 40 ವಾಲಿಬಾಲ್​ ತಂಡ ಹಾಗೂ 20 ಥ್ರೋ ಬಾಲ್​ ತಂಡ ನೋಂದಾಯಿಸಿದೆ ಎಂದರು.

ಉಡುಪಿಯಲ್ಲೇ ವಿಭಾಗ ಮಟ್ಟದ ಪಂದ್ಯ

ಕರ್ನಾಟಕದ 15 ಜಿಲ್ಲೆಗಳ 18 ಕ್ಲಸ್ಟರ್​ಗಳ ವಿಭಾಗ ಮಟ್ಟದ ಚಿಕ್ಕಮಗಳೂರು ಹಾಗೂ ಉಡುಪಿಯಲ್ಲಿ (ತಲಾ 9 ಕ್ಲಸ್ಟರ್​) ನಡೆಯಲಿದೆ. ಉಡುಪಿಯ ಕೆರಾಡಿಯಲ್ಲಿ ವಿಭಾಗ ಮಟ್ಟದ ಕ್ರೀಡೆ ನಡೆಯಲಿದೆ. ಇಲ್ಲಿ ಗೆದ್ದವರು ಕೊಯಂಬತ್ತೂರಿನಲ್ಲಿ ನಡೆಯವಫೈನಲ್​ ಪಂದ್ಯಗಳಿಗೆ ಆಯ್ಕೆಯಾಗಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಫೌಂಡೇಷನ್​ನ ಸ್ವಯಂ ಸೇವಕರಾದ ಅಮಿತಾ ಭಟ್​, ಹರಿಣಿ ಶೆಟ್ಟಿ, ಸಜ್ಜನ್​ ಹೆಗ್ಡೆ ಇದ್ದರು.

ಪ್ರಥಮ 5 ಲಕ್ಷ ರೂ. ಬಹುಮಾನ

ಮೊದಲನೇ ಹಂತದ (ಕ್ಲಸ್ಟರ್​) ಪಂದ್ಯದಲ್ಲಿ ಗೆದ್ದವರಿಗೆ ಪ್ರಥಮ 10 ಸಾವಿರ ರೂ., ದ್ವೀತಿಯ 7, ತೃತೀಯ 5 ಹಾಗೂ ಚತುರ್ಥ 4 ಸಾವಿರ ರೂ. ಬಹುಮಾನವಿದೆ. ವಿಭಾಗ ಮಟ್ಟದಲ್ಲಿ ವಿಜೇತರಾದವರಿಗೆ ಕ್ರಮವಾಗಿ 12 ಸಾವಿರ ರೂ., 8, 6 ಹಾಗೂ 4 ಸಾವಿರ ರೂ. ಬಹುಮಾನವಿದೆ. ಅಂತಿಮ ಪಂದ್ಯದಲ್ಲಿ ವಿಜೇತರಾಗುವ ತಂಡಕ್ಕೆ ತಲಾ 5 ಲಕ್ಷ ರೂ. ಬಹುಮಾನ ಹಾಗೂ ಶೀಲ್ಡ್​ ನೀಡಲಾಗುತ್ತಿದೆ ಎಂದು ತಿಳಿಸಿದರು. 14 ವರ್ಷ ಮೇಲ್ಪಟ್ಟ ಎಲ್ಲ ವಯೋಮಾನದವರೂ ಗ್ರಾಮೋತ್ಸವದಲ್ಲಿ ಪಾಳ್ಗೊಳ್ಳಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವುದು ಸದ್ಗುರು ಅವರ ಸಂಕಲ್ಪವಾಗಿದೆ. ನೋಂದಣಿ ಉಚಿತವಾಗಿದೆ. ಮಾಹಿತಿಗಾಗಿ ಮೊ.ಸಂ. 8300030999 ಸಂಪರ್ಕಿಸಬಹುದು ಎಂದರು.