ಜಿಲ್ಲೆ

ಬುಡಕಟ್ಟು ಮಹಿಳೆಯರಿಗೆ ಈಶ ಫೌಂಡೇಷನ್​ ಬಲ

ಎನ್.ವೆಂಕಟೇಶ್

 ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್​ ಓರಾಮ್​ ಮೆಚ್ಚುಗೆ

ಕೊಯಂಬತ್ತೂರು: ಬುಡಕಟ್ಟು ಮಹಿಳೆಯರು ಸಹ ಸ್ವಾವಲಂಬಿ ಉದ್ಯೋಗ ಚಟುವಟಿಕೆ ಹಾಗೂ ಆದಾಯ ಗಳಿಕೆಯ ಮೂಲಕ ತೆರಿಗೆದಾರರಾಗುವ ಮಟ್ಟಿಗೆ ಬೆಳೆಯುತ್ತಿರುವುದು ವಿಕಸಿತ ಭಾರತಕ್ಕೆ ಪೂರಕವಾಗಿದೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್​ ಓರಾಮ್​ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ಈಶ ಆದಿಯೋಗಿ ಧ್ಯಾನ ಹಾಗೂ ಯೋಗ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬುಡಕಟ್ಟು ಸಮುದಾಯದವರೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಶ ಫೌಂಡೇಷನ್​ನ ಬೆಂಬಲದೊಂದಿಗೆ ಬುಡಕಟ್ಟು ಮಹಿಳೆಯರು ಲಾಧಿಪತಿಗಳಾಗಿ, ಈಗ ಆದಾಯ ತೆರಿಗೆ ಪಾವತಿಸುವ ಹಂತಕ್ಕೆ ಬೆಳೆದಿರುವುದು ಶ್ಲಾನೀಯ. ಇಂತಹ ಬೆಳವಣಿಗೆಗಳು ವಿಕಸಿತ ಭಾರತಕ್ಕೆ ಸಹಕಾರಿಯಾಗಿವೆ. ತಳ ಸಮುದಾಯಗಳ ಉನ್ನತಿಕರಣದ ಪ್ರಧಾನಿ ನರೇಂದ್ರ ಮೋದಿ ಮತ್ತು ಸದ್ಗುರುಗಳ ದೃಷ್ಟಿಕೋನದ ಯೋಜನೆಗಳು ಯಶಸ್ವಿಗೊಳ್ಳುತ್ತಿರುವುದನ್ನು ಸಾರುತ್ತವೆ ಎಂದರು.

ಹಲವು ವರ್ಷಗಳಿಂದಲೂ ಈಶ ಸಂಸ್ಥೆಯು ಆರೋಗ್ಯ ಸೇವೆ, ಶಿಣ ಮತ್ತು ಜೀವನೋಪಾಯ ಮಾರ್ಗಗಳ ಸುಧಾರಣೆಯ ಮೂಲಕ ಇಲ್ಲಿನ ಬುಡಕಟ್ಟು ಮತ್ತು ಗ್ರಾಮೀಣ ಭಾಗದ ಜನರಿಗೆ ಶಕ್ತಿ ತುಂಬುತ್ತಿದೆ. ಆರ್ಥಿಕ ಸಬಲೀಕರಣದ ಜತೆಗೆ ಈಶ ವಿದ್ಯಾರ್ಥಿ ವೇತನ, ತ್ಯಾಜ್ಯ ನಿರ್ವಹಣೆ, ಪೌಷ್ಟಿಕ ಪೂರಕಗಳು, ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೌಶಲ ನಿರ್ಮಾಣ ಕಾರ್ಯಾಗಾರಗಳು ಮತ್ತು ತರಬೇತಿ ಸೇರಿ ವಿವಿಧ ಕ್ರಿಯಾಶೀಲ ಚಟುವಟಿಕೆಯಿಂದ ಪ್ರಗತಿಯತ್ತ ಕೊಂಡೊಯ್ಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಧನೆಗೆ ಮೆಚ್ಚುಗೆ

ತಾನಿಕಂಡಿ ಗ್ರಾಮದ ಬುಡಕಟ್ಟು ಮಹಿಳೆಯರು ಈಶ ಸಂಸ್ಥೆಯ ಮಾರ್ಗದರ್ಶನದಲ್ಲಿ 2018ರಲ್ಲಿ ಚೆಲ್ಲಮಾರಿಯಮ್ಮನ್​ ಸ್ವಸಹಾಯ ಗುಂಪು ರಚಿಸಿಕೊಂಡು, 200 ರೂ. ಪ್ರಾರಂಭಿಕ ಬಂಡವಾಳದೊಂದಿಗೆ ಆದಿಯೋಗಿ ಕೇಂದ್ರದ ಬಳಿ ಚಿಕ್ಕ ಅಂಗಡಿಗಳನ್ನಿಟ್ಟುಕೊಂಡು ಕೈಗೊಂಡ ವಹಿವಾಟು ದೊಡ್ಡಮಟ್ಟದಲ್ಲಿ ಬೆಳೆದು, ಇಲ್ಲಿನ ಸ್ವಯಂ ಉದ್ಯೋಗಿ ಮಹಿಳೆಯರು ಹೆಮ್ಮೆಯಿಂದ ತೆರಿಗೆ ಪಾವತಿಸುವ ಮೂಲಕ ಸುಭದ್ರ ದೇಶ ನಿರ್ಮಾಣದ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.

ವಿವಿಧೆಡೆ ಭೇಟಿ

ಕೇಂದ್ರ ಸಚಿವರು 112 ಅಡಿ ಎತ್ತರದ ಆದಿಯೋಗಿ, ಶಕ್ತಿ ಸಂದೇಶಾತ್ಮಕ ಸೂರ್ಯಕುಂಡ, ಆಳವಾದ ಾನ ಸಂಕೇತದ ಧ್ಯಾನಲಿಂಗ, ಉಗ್ರ ಸ್ವರೂಪಿಯಾದರೂ ಕರುಣಾಮಯಿ, ದೈವಿಕ ಸಿತತ್ವದ ಅಭಿವ್ಯಕ್ತಿಯ ಲಿಂಗ ಭೈರವಿ ದೇವಿ ಸೇರಿ ಈಶ ಯೋಗ ಕೇಂದ್ರದ ಪ್ರತಿಷ್ಠಾಪಿತ ಸ್ಥಳಗಳನ್ನು ವೀಸಿದರು. ಭಾರತೀಯ ಗುರುಕುಲ ವ್ಯವಸ್ಥೆಯಲ್ಲಿ ಬೇರೂರಿರುವ ಸಾಂಪ್ರದಾಯಿಕ ವಸತಿ ಶಾಲೆಯಾದ ಸದ್ಗುರು ಗುರುಕುಲಂ ಸಂಸತಿ ಮತ್ತು ಸಮಗ್ರ, ಮಗುವಿನ&ಕೇಂದ್ರಿತ ಶಿಣದ ವಿಧಾನಕ್ಕೆ ಹೆಸರುವಾಸಿಯಾದ ಈಶ ಹೋಮ್​ ಸ್ಕೂಲ್​ಗೆ ಭೇಟಿ ನೀಡಿ ಮಾಹಿತಿ ಪಡೆದರು.