ಮಂಗಳೂರು : ನಗರದ ಕೊಡಿಯಾಲ್‌ಬೈಲ್‌ನ ಇಸ್ಕಾನ್ ಸಂಸ್ಥೆಯ ವತಿಯಿಂದ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸಂಭ್ರಮ ಸಡಗರದಿಂದ ಸಂಸ್ಥೆಯ ಮುಖ್ಯಸ್ಥ ಗುಣಕರ ರಾಮದಾಸ ಇವರ ನೇತೃತ್ವದಲ್ಲಿ ಆಚರಿಸಲಾಯಿತು. ಶ್ರೀಕೃಷ್ಣನ
ಬೆಳ್ಳಿಯ ವಿಗ್ರಹಕ್ಕೆ ನೂತನ ವಸ್ತ್ರವಿನ್ಯಾಸ, ಆಭರಣ ಮತ್ತು ಕಿರೀಟದಿಂದ ಅಲಂಕರಿಸಲಾಗಿತ್ತು. ಪ್ರಾತಃಕಾಲ ಮುಖ್ಯ ಅರ್ಚಕ ಪುರೋಹಿತ ದೇವಕಿತನಯ ದಾಸರಿಂದ ಶ್ರೀ ಕೃಷ್ಣ ಭಗವಂತನಿಗೆ ಅಲಂಕಾರ ಮತ್ತು ಶೃಂಗಾರ ಪೂಜೆ ನೆರವೇರಿತು.
ಶಾಲಾ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ ರಾಜಭೋಗ ಆರತಿ, ಸಾಯಂಕಾಲ ವಿವಿಧ ತಂಡದಿಂದ ಭಜನೆ, ಕೀರ್ತನೆ, ಧಾರ್ಮಿಕ ಪ್ರವಚನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಭಕ್ತರು ಬೆಣ್ಣೆ ಕೃಷ್ಣನ ತೊಟ್ಟಿಲು ಸೇವೆಯನ್ನು ಸಲ್ಲಿಸಿದರು. ಸನಾತನ ದಾಸ ಮತ್ತು ಸುಂದರ ಗೌರದಾಸ ಅವರ ನೇತೃತ್ವದಲ್ಲಿ
ಸಾಯಂಕಾಲ ಸಂಧ್ಯಾರತಿ , ಮಹಾಭಿಷೇಕ ನೆರವೇರಿತು.