ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿ ಹೊಂದಿದ ಜಿಲ್ಲೆಯಲ್ಲಿ ಯಾವುದೇ ಬಜೆಟ್ ಮಂಡನೆಯಾದರು ಸರ್ಕಾರ ಮಾತ್ರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದು, ಈ ಬಾರಿ ಸಿಎಂ ಸಿದ್ದರಾಮಯ್ಯ ಮಂಡನೆ ಮಾಡುವ ಬಜೆಟ್‌ನಲ್ಲಿ ಜಿಲ್ಲೆಯ ಜನರಿಗೆ ಹೆಚ್ಚಿನ ನಿರೀಕ್ಷೆ ಇದ್ದು,ಈ ಭಾಗದಲ್ಲಿ ಗುಳೆ ತಪ್ಪಿಸಲು ಯಾವೇಲ್ಲ ಯೋಜನೆಗಳನ್ನು ಜಾರಿ ಮಾಡುತ್ತಾರೆ ಕಾದು ನೋಡಬೇಕಿದೆ.
ರಾಜ್ಯದಲ್ಲಿ ಸುಮಾರು ವರ್ಷಗಳಿಂದ ಆನೇಕ ಬಜೆಟ್ ಮಂಡನೆ ಸಂದರ್ಭದಲ್ಲಿ ಅನೇಕ ಯೋಜನೆಗಳು ಜಾರಿ ಮಾಡಿವೆ ಆದರೆ ಯೋಜನೇಗಳು ಮಾತ್ರ ಪೂರ್ಣಗೊಳ್ಳದೆ ನೆನೆಗುದ್ದಿಗೆ ಬಿದ್ದಿವೆ. ಅವುಗಳಿಗೆ ಕಾಯಕಲ್ಪ ನೀಡುವ ಕೆಲಸವಾಗುತ್ತಿಲ್ಲ. ಈ ಹಿಂದೆ ಘೋಷÀಣೆಯಾಗಿರುವ ಯೋಜನೆಗಳಿಗೆ ಅನುದಾನ ನೀಡದಿರುವುದರಿಂದ ಯೋಜನೆಗಳು ಪೂರ್ಣಗೊಳ್ಳದೆ ಕುಂಟುತ್ತಾ ಸಾಗುವಂತಾಗಿದೆ.
ಯೋಜನೆಗಳು ಅನುಷ್ಠಾನವಾಗಲಿ
ಕಳೆದ ಬಾರಿ ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿದ್ದರು, ಪ್ರಮುಖವಾಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ೨೨೦ ಕೋಟಿ, ಎಪಿಎಂಸಿಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣಕ್ಕೆ ೨೫ ಕೋಟಿ ರೂ. ಕÊಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶಿಥಿಲ ಗÊಹಗಳ ನಿರ್ಮಾಣಕ್ಕೆ ೪೦ ಕೋಟಿ, ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಇತರೆ ಪ್ರದೇಶಗಳಿಗೆ ನಾರಾಯಣಪೂರ ಬಲದಂಡೆ ಕಾಲುವೆಯಿಂದ ೯೯೦ ಕೋಟಿ ರೂ, ನೀರಾವರಿ ಕಲ್ಪಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ, ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ರಿಜ್ ಕಂ ಬ್ಯಾರೆಜ್ ನಿರ್ಮಾಣ, ಕುರ್ಡಿ ಗ್ರಾಮದ ಕೆರೆ ತುಂಬವ ಯೋಜನೆ, ಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ, ಮಹಿಳಾ ಮಿಲ್ಕ್ ಬ್ಯಾಂಕ್ ಸ್ಥಾಪನೆ, ವಿಜ್ಞಾನ ಕೇಂದ್ರ ತಾರಾಲಯ ಸ್ಥಾಪನೆ, ಮಂತ್ರಾಲಯ ಹತ್ತಿರದ ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸುವ ರಾಯಚೂರಿನ ಚಿಕ್ಕ ಮಂಚಾಲಿ ಗ್ರಾಮದ ಹತ್ತಿರ ಬ್ರಿಜ್ ಕಂ ಬ್ಯಾರೆಜ್ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ೧೫೮ ಕೋಟಿ ರೂ. , ರಾಯಚೂರು ವಿಶ್ವ ವಿದ್ಯಾಲಯದಿಂದ ವಿಶ್ವ ವಿದ್ಯಾಲಯ ಘಟಕ ಕಾಲೇಜು ಸ್ಥಾಪನೆ ಮಾಡಲು ಬಜೆಟ್ ಮಂಡನೆ ಮಾಡಿದ್ದರು ಆದರೆ ಈ ಯೋಜನೆಗಳು ಅನುಷ್ಠಾನಗದೆ ಇರುವುದು ಶೋಚನೀಯ ಸಂಗತಿಯಾಗಿದೆ.
ರಾಯಚೂರು ವಿವಿಗೆ ಆನುದಾನ
ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣವು ಸ್ಥಳೀಯವಾಗಿ ದೊರೆಬೇಕು ಎನ್ನುವ ಉದ್ದೇಶದಿಂದ ೨೦೧೭ ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ನೂತನ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದರು. ಆದರೆ ನಂತರದಲ್ಲಿ ವಿವಿಗೆ ಅನುದಾನ ಹಾಗೂ ಕುಲಪತಿ ನೇಮಕ ಮಾಡಲು ಪ್ರತಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು ಎನ್ನುವ ಬೇಡಿಕೆಗೆ ಮನ್ನಣೆ ದೊರೆತಿಲ್ಲ. ಇದರಿಂದಾಗಿ ವಿವಿ ಆರ್ಥಿಕವಾಗಿ ಸಂಕಷÀ್ಟ ಎದುರಿಸುವಂತಹ ಸ್ಥಿತಿಯಲ್ಲಿದೆ.
ಈ ಬಾರಿಯಾದರು ಕೋಟೆ ಉತ್ಸವವಾಗಲಿ
ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಯ ಮುದಗಲ್ ಕೋಟೆ ಉತ್ಸವ ಮಾಡುವುದರ ಜತೆಗೆ ನೂತನ ತಾಲೂಕು ಘೋಷಣೆ ಮಾಡುತ್ತೇವೆ ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು ಆದರೆ ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡುತ್ತಾರೆ ಎನ್ನುವ ನೀರಿಕ್ಷೆ ಇತ್ತು. ಆದರೆ ಅದು ಈಡೇರಲಿಲ್ಲ ಆದರಿಂದ ಈ ಬಾರಿ ಘೋಷಣೆಯಾಗಬಹುದು ಎನ್ನುವ ಅಸೆ ಜನರು ಇಟ್ಟುಕೊಂಡಿದ್ದಾರೆ.
ವಿಮಾನ ಹಾರಟವಾಗಲಿ
ವಿಮಾನ ನಿಲ್ದಾಣಕ್ಕೆ ಭೂ ಸ್ವಾÃನ ಕಾರ್ಯ ನನೆಗುದಿಗೆ ಬಿದ್ದಿದ್ದು, ಈ ಹಿಂದೆ ಘೋಷÀಣೆಯಾಗಿದ್ದ ೧೮೬ ಕೋಟಿ ರೂ.ಗಳ ಜತೆಗೆ ಕಳೆದ ಬಜೆಟ್‌ನಲ್ಲಿ ೨೨೦ ಕೋಟಿ ರೂ ಘೋಷಣೆ ಮಾಡಲಾಗಿದೆ. ಆದರೆ ಯಾವುದೇ ಕಾಮಗಾರಿಗಳು ಮಾತ್ರ ನಡೆಯದೆ ಅಽಕಾರಿಗಳು ಕೇವಲ ಸಭೆಗಳು ನಡೆಸಿ ಕಾಲಹರಣ ಮಾಡುತ್ತಿದ್ದಾರೆ.
ಮೆಗಾ ಟೆಕ್ಸ್ಟೈಲ್ ಪಾರ್ಕ್
ಏಷ್ಯಾದಲ್ಲೇ ಎರಡನೇ ಅತಿಹೆಚ್ಚು ಹತ್ತಿ ಬೆಳೆಯುವ ರಾಯಚೂರು ಜಿಲ್ಲೆಯಲ್ಲಿ ಮೆಗಾ ಟೆಕ್ಸ್ಟೈಲ್ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರವು ಮರುಪ್ರಸ್ತಾವನೆ ಕಳುಹಿಸಬೇಕು. ಜಿಲ್ಲೆಯಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ಜವಳಿ ಪಾರ್ಕ್ ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಘೋಷಣೆ ಮಾಡಿ ಸಲಹಾ ಸೇವೆ ಪಡೆಯಲು ಖಾಸಗಿ ಸಂಸ್ಥೆಗಳಿAದ ಟೆಂಡರ್ ಕರೆದಿತು. ರಾಯಚೂರು ತಾಲ್ಲೂಕಿನ ಬೀಜನಗೇರಾ ಭಾಗದಲ್ಲಿ ೧೫ ಎಕರೆ ಜಮೀನು ಜವಳಿ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರಿ ಜಮೀನನ್ನು ಮೀಸಲಿಟ್ಟಿದೆ. ಇದರಲ್ಲಿ ಕೇವಲ ಒಂದು ಸಾವಿರ ಜನರಿಗೆ ಮಾತ್ರ ಉದ್ಯೋಗ ನೀಡಬಹುದಾಗಿದೆ. ಆದರೆ ಕೇಂದ್ರದ ಪ್ರಧಾನ ಮಂತ್ರಿ ಮೇಗಾ ಜವಳಿ ಪಾರ್ಕ್ ಮಂಜೂರು ಮಾಡಿದರೆ ಜಿಲ್ಲೆಯಲ್ಲಿ ಹೆಚ್ಚಿನ ಜನರಿಗೆ ಉದ್ಯೋಗ ದೊರಕಿಸಿಸುವುದರ ಜತೆಗೆ ಗುಳೆ ತಪ್ಪಿಸಬಹುದು.\
ಸಮತೋಲನ ಜಲಾಶಯವಾಗಲಿ
ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆಭಾಗದ ರೈತರು ಎದುರಿಸುತ್ತಿರುವ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆ ಯ ನವಲಿ ಹತ್ತಿರ ಸಮತೋಲನ ಜಲಾಶಯ ನಿರ್ಮಾಣ ಮಾಡುವ ಕುರಿತಂತೆ ಹಲವಾರು ಬಜೆಟ್‌ನಲ್ಲಿ ಪ್ರಸ್ತಾಪವಾಗಿದೆ. ಆದರೆ ಯಾರು ಕ್ರಮ ಕೈಗೊಂಡಿಲ್ಲ. ಈ ಬಾರಿಯಾದರು ಸಮತೋಲನ ಜಲಾಶಯ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ.
ಏಮ್ಸ್ಗೆ ಖಾತ್ರಿ ಏನಾಗುತ್ತೆ?
ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವ ಭರವಸೆ ನೀಡಿತ್ತು. ಸಿಎಂ ಸಿದ್ದರಾಮಯ್ಯ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದು ಕೈತೊಳೆದುಕೊಂಡಿದ್ದು, ಏಮ್ಸ್ ಸ್ಥಾಪನೆಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ಬಜೆಟ್‌ನಲ್ಲಿ ಖಾತ್ರಿ ನೀಡುವ ಮೂಲಕ ಅನುದಾನ ಘೋಷಣೆ ಮಾಡುತ್ತಾರಾ ಎಂದು ಕಾದು ನೋಡಬೇಕಾಗಿದೆ.