ಜಿಲ್ಲೆ

ಮೃತ್ಯು ಕೂಪವಾದ ಕೃಷಿ ಹೊಂಡ?

ಚಿಂತಾಮಣಿ ತಾಲೂಕಿನಲ್ಲಿ ಏಪ್ರಿಲ್​ನಿಂದ ಈವರೆಗೆ 10-12 ಜನರು ಬಲಿ| ತಂತಿಬೇಲಿ ಅಳವಡಿಸಲು ಸಹಾಯಕ ಕೃಷಿ ನಿರ್ದೇಶಕ ಮನವಿ

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ

ತಾಲೂಕಿನಲ್ಲಿ ನರೇಗಾ, ಕೃಷಿ ಭಾಗ್ಯ, ರಾಷ್ಟ್ರೀಯ ತೋಟಗಾರಿಕಾ ಮಿಷನ್​ ಯೋಜನೆಯಡಿ ಮತ್ತು ಕೆಲವು ರೈತರು ಸ್ವಂತವಾಗಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಆದರೆ, ಕೆಲವು ಕೃಷಿ ಹೊಂಡಗಳಿಗೆ ತಂತಿ ಬೇಲಿ ಅಳವಡಿಸದಿರುವುದು ಜನರ ಪ್ರಾಣಕ್ಕೆ ಕುತ್ತಾಗಿದೆ.

ತಾಲೂಕಿನಲ್ಲಿ ಏಪ್ರಿಲ್​ನಿಂದ ಈಚೆಗೆ ಕೈಕಾಲು ತೊಳೆಯಲು, ನೀರು ಕುಡಿಯಲು ಹೋಗಿ ಕಾಲು ಜಾರಿ ಸುಮಾರು 10 ಜನರು ಕೃಷಿ ಹೊಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಕೃಷಿ ಹಾಗೆಯೇ ಕೃಷಿ ಹೊಂಡದ ಒಳಗೆ ನಾಲ್ಕೂ ಮೂಲೆಗಳಲ್ಲಿ ಹಗ್ಗ ಇಳಿ ಬಿಟ್ಟು ಅದರ ಕೊನೆಯಲ್ಲಿ ಹಳೆಯ ಟಯರ್​ಗಳನ್ನು ಕಟ್ಟಿದರೆ ಆಕಸ್ಮಿಕವಾಗಿ ಯಾರಾದರೂ ಕಾಲು ಜಾರಿ ಬಿದ್ದಲ್ಲಿ ಹಗ್ಗವನ್ನು ಹಿಡಿದು ಕೊಳ್ಳುವ ಮೂಲಕ ಪ್ರಾಣಾಪಾಯದಿಂದ ಪಾರಾಗಬಹುದು. ಈ ಕ್ರಮ ಅನುಸರಿಸಿ ಜನರ ಪ್ರಾಣ ಉಳಿಸಿ ಮತ್ತು ಪೊಲೀಸರಿಂದ ಕ್ರಿಮಿನಲ್​ ಮೊಕದ್ದಮೆ ಹೂಡುವುದನ್ನು ತಪ್ಪಿಸಿಕೊಳ್ಳಿ ಎಂದು ಕೋರಿದ್ದಾರೆ.

ೆನ್ಸಿಂಗ್​ ಅಳವಡಿಕೆಗೆ ನೆರವು

ಕೃಷಿ ಇಲಾಖೆಯಿಂದ ಕೃಷಿ ಭಾಗ್ಯಯೋಜನೆಯಡಿ ತಂತಿ ಬೇಲಿ ನಿರ್ಮಾಣಕ್ಕೆ ಸಾಮಾನ್ಯ ವರ್ಗದ ರೈತರಿಗೆ ಶೇ.40 ಮತ್ತು ಪ.ಜಾತಿ ಮತ್ತು ಪ.ಪಂಗಡ ವರ್ಗದ ರೈತರಿಗೆ ಶೇ.45 ಸಹಾಯಧನ ಸರ್ಕಾರದಿಂದ ನೀಡುತ್ತಿದ್ದು, 2023&24 ರಿಂದ 2025&26 ರವರೆಗೆ ಕೃಷಿ ಇಲಾಖೆಯ ಸಹಾಯಧನದಲ್ಲಿ ನಿರ್ಮಿಸಿರುವ ಕೃಷಿ ಹೊಂಡಗಳಲ್ಲಿ ಹಲವು ರೈತರು ತಂತಿ ಬೇಲಿ ನಿರ್ಮಿಸಿಕೊಂಡಿದ್ದಾರೆ. ಇದರ ಜತೆಗೆ ಕೃಷಿ ಹೊಂಡದ ಬಳಿ ಅಪಾಯ ಬೋರ್ಡ್​ ಹಾಕಲು ಸರ್ಕಾರದಿಂದ ರೂ.2000 ನೀಡಲು ಅವಕಾಶವಿದ್ದು, ರೈತರು ಬಳಸಿಕೊಂಡು ಅಪಾಯ ತಪ್ಪಿಸಬೇಕೆಂದು ಚಿಂತಾಮಣಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಅಮರನಾರಾಯಣರೆಡ್ಡಿ ತಿಳಿಸಿದ್ದಾರೆ.