ಕುಣಿಗಲ್​ ತಾಲೂಕಿನ ಕಾಡುಮತ್ತಿಕೆರೆ ಗ್ರಾಮದಲ್ಲಿ ಸಂಸದ ಸಿ.ಎನ್​.ಮಂಜುನಾಥ್​ ಶುದ್ಧ ಕುಡಿಯುವ ನೀರಿನ ಟಕ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ತುಮುಲ್​ ನಿರ್ದೇಶಕ ಡಿ.ಕಷ್ಣಕುಮಾರ್​, ಜಿಪಂ ಮಾಜಿ ಅಧ್ಯ ಡಾ.ರವಿ, ತಾಲೂಕು ಬಿಜೆಪಿ ಅಧ್ಯ ದಿನೇಶ್​, ಜೆಡಿಎಸ್​ ವಕ್ತಾರ ತರೀಕೆರೆ ಪ್ರಕಾಶ್​ ಇದ್ದರು. 
ಜಿಲ್ಲೆ

ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಜನಗಣತಿ ಬೇಕೇ?

ತುಮಕೂರು ಡೆಸ್ಕ್

ಸಂಸದ ಡಾ.ಸಿ.ಎನ್​.ಮಂಜುನಾಥ್​ ಪ್ರಶ್ನೆ

ಕುಣಿಗಲ್​: ಜಾತ್ಯತೀತ ರಾಷ್ಟ್ರ ಎಂದ ಮೇಲೆ ಜಾತಿ ಏಕೆ ಬೇಕು?, ಜಾತಿ ಜನಗಣತಿ ಏಕೆ ಬೇಕು ಎಂದು ಪ್ರಶ್ನಿಸಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ೇತ್ರದ ಸಂಸದ ಡಾ.ಸಿ.ಎನ್​.ಮಂಜುನಾಥ್​, 10 ವರ್ಷದ ಹಿಂದೆ ಆಗಿರುವ ಸಮೀೆ ಈಗ ಅಪ್ರಸ್ತುತ ಎಂದು ಹೇಳಿದರು.

ತಾಲೂಕಿನ ಕಸಬಾ ಹೋಬಳಿ ಕಾಡುಮತ್ತಿಕೆರೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಟಕ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸಾಮಾಜಿಕ, ಶೆಣಿಕ ಸಮೀೆ (ಜಾತಿಗಣತಿ) ಎಲ್ಲವೂ ವೆಜ್ಞಾನಿಕವಾಗಿ ಆಗಬೇಕು. 2014 ಕ್ಕೂ 2025ಕ್ಕೂ ಭಾರಿ ವ್ಯತ್ಯಾಸವಿದೆ ಎಂದರು.

ಜಾತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದಂತಹವ್ಯಕ್ತಿ ಅಂಬೇಡ್ಕರ್​. ಆದರೆ, ಹೀಗೆ ಮಾಡುವುದರಿಂದ ಸಂವಿಧಾನದ ವಿರುದ್ಧ ಹೋಗುತ್ತಿದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ಎಲ್ಲ ವರ್ಗದಲ್ಲೂ ಬಡವರು ಇದ್ದೇವೆ. ಅವರಿಗೆ ಸೌಲಭ್ಯ, ಸವಲತ್ತು ಕೊಡಬೇಕು. ನಮ್ಮ ಮೌಲ್ಯಮಾಪನ ಹೇಗಿರಬೇಕೆಂದರೇ ಅವರ ಶೆಣಿಕತೆಯನ್ನುತಿಳಿದು ತುಳಿತಕ್ಕೆ ಒಳಗಾದ ಎಲ್ಲರಿಗೂ ಸಹಾಯ ಮಾಡಬೇಕು ಎಂದರು.

ಭಾರತೀಯ ಎಂದೇ ಬರೆಯುವಂತಾಗಲಿ

ಈಗಾಗಲೇ ದೇಶದಲ್ಲಿ ಮೀಸಲಾತಿ ಇದೆ. ಆರ್ಥಿಕ, ಶೆಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲಾಗುತ್ತಿದೆ. ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ ಜಾತಿ ಕಾಲಂನಲ್ಲಿ ಯಾವುದೇ ಜಾತಿ ಹೆಸರನ್ನು ಬರೆಯದೆ ಭಾರತೀಯ ಎಂದು ಬರೆಯಬೇಕು. ಮುಂದುವರಿದ, ಹಿಂದುಳಿದ ಜಾತಿ ಮುಖ್ಯವಲ್ಲ, ಆರ್ಥಿಕವಾಗಿ ಕಷ್ಟದಲ್ಲಿ ಇರುವಂತಹವರಿಗೆ ಸಹಾಯ ಮಾಡಬೇಕು ಎಂದು ಸಂಸದರು ಹೇಳಿದರು

ನರೇಗಾ ಅನುಷ್ಠಾನ ಸಮರ್ಪಕವಾಗಿರಲಿ: ತಾಲೂಕಿನಲ್ಲಿ 350ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಟಕಗಳು ಇವೆ. ಈ ಪೆಕಿ 50 ಟಕಗಳು ದುರಸ್ತಿಯಲ್ಲಿವೆ ಎಂದು ತಿಳಿದು ಬಂದಿದೆ. ಅಂತರ್ಜಲ ವದ್ಧಿಸಲು ನರೇಗಾದಲ್ಲಿ ಆನೇಕ ಕಾರ್ಯಕ್ರಮಗಳಿವೆ. ಅದನ್ನು ಸದ್ಬಳಕ್ಕೆ ಮಾಡಿಕೊಂಡು ಹೊಂಡ, ಚೆಕ್​ ಡ್ಯಾಂ ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಹೆಚ್ಚಿಸಬೇಕಿದೆ ಎಂದ ಸಂಸದರು, ನರೇಗಾದಲ್ಲಿ ಈಗ ಕೂಲಿ ಹೆಚ್ಚಿಗೆ ಮಾಡಲಾಗಿದೆ. ಹಾಗಾಗಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಎಂದರು.

ತಾಲೂಕಿನ ಹುತ್ರಿದುರ್ಗ, ನೀಲಸಂದ್ರ, ಸೀನಪ್ಪನಹಳ್ಳಿ, ಕಾಡುಮತ್ತಿಕೆರೆ ಯಾಚಟ್ಟ, ಕುಣಿಗಲ್​ ಪಟ್ಟಣದ ಬೆರಾಗಿ ಮಠ, ಬಾಗೇನಹಳ್ಳಿ, ಜಾಣಗೆರೆ, ನಡೆಮಾವಿನಪುರ, ಯಡಿಯೂರು, ಬ್ಯಾಡಗೆರೆ, ಹುಲಿಯೂರುದುರ್ಗ, ನಿಡಸಾಲೆ, ಉಜ್ಜನಿ ಗ್ರಾಮದಲ್ಲಿ ಬಸ್​ ತಂಗುದಾಣ, ಶುದ್ದ ಕುಡಿಯುವ ನೀರಿನ ಟಕಕ್ಕೆ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಪುರಸಭೆ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪಟ್ಟಣದ ಅಭಿವದ್ಧಿ ಬಗ್ಗೆ ಚರ್ಚಿಸಿದರು.