ವಿಜಯಪುರ: ನೀರಾವರಿ ಯೋಜನೆ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಂದ ಇಲ್ಲಿನ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಹಣ್ಣು ಹಂಪಲಗಳಿಂದ ತುಲಾಭಾರ ಮಾಡುವ ಮೂಲಕ ಕೃತತೆ ಸಲ್ಲಿಸಿದ್ದು, ಸಚಿವನಾಗಿ ನಾನು ಕೈಗೊಂಡ ಕಾರ್ಯಗಳಿಂದ ನನಗೆ ಸಂತೃಪ್ತಿ ಭಾವನೆ ಮೂಡಿದೆ ಎಂದು ಜಿಲ್ಲಾ ಉಸ್ತುವಾರಿ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ಮತೇತ್ರದ ತಿಕೋಟಾ ತಾಲೂಕಿನ ನಿಡೋಣಿ ಗ್ರಾಮದಲ್ಲಿ ಕೆಬಿಜೆನ್ನೆಎಲ್ ವತಿಯಿಂದ ಕೈಗೊಂಡ ಬಬಲೇಶ್ವರ ಶಾಖಾ ಕಾಲುವೆ ಸಂ&1ರ ಅಡಿ ಬರುವ 5ಎ ಮತ್ತು 5ಬಿ ಲಿಫ್ಟ್ಗಳ ಜಾಕ್ವೆಲ್ ಹಾಗೂ ಪೈಪ್ಗಳ ಮೂಲಕ ವಿತರಣಾ ಜಾಲಗಳನ್ನೊಳಗೊಂಡ ಕಾಮಗಾರಿ ಮತ್ತು ವಿತರಣಾ ಕಾಲುವೆ ಸಂ&15 ಹಾಗೂ ಅದರಡಿಯ ಲ್ಯಾಟರಲ್ ಮೈನರ್ ಜಾಲಗಳನ್ನೊಳಗೊಂಡ ಕಾಮಗಾರಿಗಳಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ನಂತರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಬಲೇಶ್ವರ ಶಾಖಾ ಕಾಲುವೆಯ ಕಿ.ಮೀ. 40.920 ರಲ್ಲಿ 5ಎ, ಕಿಮೀ 18.105ರಲ್ಲಿ 5ಬಿ ಲಿಫ್ಟ್ಗಳ ಜಾಕ್ವೆಲ್ ನಿರ್ಮಿಸಿ ಅಲ್ಲಿಂದ ನೀರನ್ನು ಎತ್ತಿ ಅನುಕ್ರಮವಾಗಿ ಹಾಗೂ ಪೈಪಗಳ ಮೂಲಕ ವಿತರಣಾ ಜಾಲಗಳನ್ನೊಳಗೊಂಡ ಕಾಮಗಾರಿಯಿಂದ ಇಲ್ಲಿನ ಹಲವು ಗ್ರಾಮಗಳು ಸೇರಿದಂತೆ ಸಾವಿರಾರು ಎಕರೆ ನೀರಾವರಿಗೊಳಪಡಲಿದೆ. 124.76 ಕಿಮೀ ವಿತರಣಾ ಪೈಪ್ಗಳ ಉದ್ದದ 5ಎ ಲಿಫ್ಟ್ ಕಾಮಗಾರಿಯಿಂದ ಬಬಲೇಶ್ವರ, ನಿಡೋಣಿ, ನಾಗರಾಳ ಹಾಗೂ ದಾಶ್ಯಾಳ ಗ್ರಾಮದ 8600 ಎಕರೆ ಹಾಗೂ 13.765 ಕಿಮೀ ವಿತರಣಾ ಪೈಪಗಳ ಉದ್ದದ 5ಬಿ ಲಿಫ್ಟ್ ಕಾಮಗಾರಿಯಿಂದ ಬಬಲೇಶ್ವರ, ಹಲಗಣಿ ಹಾಗೂ ಕಾಖಂಡಕಿ ಗ್ರಾಮದ ಒಟ್ಟು 1355 ಎಕರೆ ನೀರಾವರಿಗೊಳಪಡಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಅಂದಾಜು 102.95 ಕೋಟಿ ರೂ. ಗಳ ವೆಚ್ಚದ ವಿತರಣಾ ಕಾಲುವೆ&15ರ ಬಬಲೇಶ್ವರ ಶಾಖಾ ಕಾಲುವೆಯ ಕಿಮೀ 40.920 ರಲ್ಲಿ ವಿತರಣಾ ಕಾಲುವೆ&15 ಆರಂಭಗೊಂಡು ಒಟ್ಟು 25.470 ಕಿಮೀ ಚಲಿಸಿ ಮಲಘಾಣ ಪಶ್ಚಿಮ ಕಾಲುವೆ ಅಂಚಿನಲ್ಲಿ ಕೊನೆಗೊಳ್ಳುವುದು. ಒಟ್ಟು 3 ಉಪ ವಿತರಣಾ ಕಾಲುವೆಗಳು ಹಾಗೂ 20 ಮೈನರ್ಗಳ ವಿತರಣಾ ಕಾಲುವೆ ಜಾಲಗಳನ್ನೊಳಗೊಂಡ ಕಾಮಗಾರಿಯಿಂದ ಜಿಲ್ಲೆಯ ನಿಡೋಣಿ, ತಿಗಣಿಬಿದರಿ, ನಾಗರಾಳ, ಯಕ್ಕುಂಡಿ, ಹೊಕ್ಕುಂಡಿ, ಅರ್ಜುಣಗಿ ಹಾಗೂ ಕುಮಠೆ ಗ್ರಾಮದ 10,182 ಎಕರೆ ಹಾಗೂ ಜಮಖಂಡಿ ತಾಲೂಕಿನ ಕಲಬೀಳಗಿ, ಗೋಠೆ, ಗದ್ಯಾಳ ಮತ್ತು ತೊದಲಬಾಗಿ ಗ್ರಾಮದ 2935 ಎಕರೆ ಜಮೀನು ನೀರಾವರಿಗೊಳಪಡಲಿದೆ ಎಂದು ತಿಳಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ನೀರಾವರಿ ಸಚಿವನಾಗಿದ್ದಾಗ ಕೈಗೊಂಡ ನೀರಾವರಿ ಯೋಜನೆಗಳಿಂದ ಈ ಭಾಗದಲ್ಲಿ ಸಮೃದ್ಧಿಯಾಗಿದೆ. ನೀರಾವರಿ ಯೋಜನೆಗಳಿಂದ ಇಲ್ಲಿನ ರೈತರು ತಮ್ಮ ಬದುಕು ಹಸನಾಗಿದ್ದು, ಆರ್ಥಿಕ ಮಟ್ಟ ಸುಧಾರಿಸಿದೆ. ಸದ್ಯ ತಮ್ಮ ಜಮೀನುಗಳಲ್ಲಿ ಬೆಳೆದ ಫಲಗಳಿಂದಲೇ ನನ್ನ ತುಲಾಭಾರ ಮಾಡಿದ್ದು ನನ್ನ ಸೌಭಾಗ್ಯ. ಇದು ರೈತರ ಬದುಕು ಹಸನಾಗಿಸಲು ಪಟ್ಟ ಶ್ರಮ ಹಾಗೂ ನನ್ನ ಪ್ರಾಮಾಣಿಕ ಸೇವೆಗೆ ದೊರೆತ ಪ್ರತಿಫಲ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಂದ ಹಳ್ಳ, ಕೆರೆ, ಇತ್ಯಾದಿ ಜಲಮೂಲಗಳು ತುಂಬಿ ಅಂತರಜಲ ಮಟ್ಟ ಹೆಚ್ಚಾಗಿದೆ. ಒಂದು ಲಕ್ಕೂ ಹೆಚ್ಚು ನಿರುಪಯುಕ್ತ ಬೋರ್ವೆಲ್ಗಳು ಮರುಪೂರಣಗೊಂಡಿವೆ. ತಿಕೋಟಾ ಹೋಬಳಿಯೊಂದಕ್ಕೆ 3600 ಕೋಟಿ ರೂ. ಗಳ ವೆಚ್ಚದಲ್ಲಿ ಬರಡು ಭೂಮಿಗೆ ನಿರೋದಗಿಸಿ ಈ ಭಾಗ ಹಸಿರಿನಿಂದ ಕಂಗೊಳಿಸಿ ಜನರು ಸಮೃದ್ಧಿಯಿಂದ ಜೀವನ ಸಾಗಿಸುತ್ತಿರುವುದೇ ನೀರಾವರಿ ಯೋಜನೆಗೆ ಫಲಶ್ರುತಿ ಎಂದು ಸಚಿವರು ತಿಳಿಸಿದರು.
ಕೆಬಿಜೆಎನ್ನೆಲ್ ಅಧೀಕ ಅಭಿಯಂತರ ಪಿ.ಆರ್. ಹಿರೇಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಡೋಣಿ ವಿರಕ್ತಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಾಲ ಅಕಾಡೆಮಿ ಅಧ್ಯ ಸಂಗಮೇಶ ಬಬಲೇಶ್ವರ, ಮಾಜಿ ಶಾಸಕ ರಾಜು ಆಲಗೂರ, ಜಿ.ಪಂ. ಮಾಜಿ ಅಧ್ಯ ಸೋಮನಾಥ ಬಾಗಲಕೋಟ ಮತ್ತಿತರರಿದ್ದರು.
ರಾಜೇಂದ್ರ ರೂಢಗಿ ಸ್ವಾಗತಿಸಿದರು. ಹುಮಾಯೂನ ಮಮದಾಪುರ ನಿರೂಪಿಸಿದರು.