ಕಬ್ಬೂರ ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ ನೀಡಿದರು. ಜಿಪಂ ಸದಸ್ಯ ಪವನ ಕತ್ತಿ, ಸುರೇಶ ಬೆಲ್ಲದ, ದುಂಡಪ್ಪ ಬೆಂಡವಾಡೆ ಮತ್ತಿತರರು ಇದ್ದರು. 
ಜಿಲ್ಲೆ

ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ

Belagavi

ಚಿಕ್ಕೋಡಿ: ಅತಿವೃಷ್ಟಿಯಿಂದ ಹಾನಿಯಾದ 53 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಡಿ.ಎಂ.ಐಹೊಳೆ ಅವರು ಸರ್ಕಾರದಿಂದ 5.93 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದಾರೆ ಎಂದು ನಾಗರಮುನ್ನೋಳಿ ಜಿಪಂ ಸದಸ್ಯ ಪವನ ಕತ್ತಿ ಹೇಳಿದ್ದಾರೆ.

ಸೋಮವಾರ ತಾಲೂಕಿನ ಕಬ್ಬೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ಅತಿವೃಷ್ಟಿಯಿಂದ ಹಾನಿಯಾದ ನಾಗರಮುನ್ನೋಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ, ್ರೌಢ ಶಾಲೆಗಳ ಕೊಠಡಿಗಳ ಮರು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ಕ್ಷೇತ್ರದಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಭವಿಷ್ಯದಲ್ಲಿ ಕರಗಾಂವ ಏತ ನೀರಾವರಿ ಹಾಗೂ ಜೈ ಹನುಮಾನ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಿಪಿಐ ಆರ್.ಆರ್.ಪಾಟೀಲ, ದುಂಡಪ್ಪ ಬೆಂಡವಾಡೆ, ವಿರೂಪಾಕ್ಷಿ ಈಟ್ಟಿ, ದಾನಪ್ಪ ಕೋಟಬಾಗಿ, ತಹಸೀಲ್ದಾರ್ ಸುಭಾಷ ಸಂಪಗಾವಿ, ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸುರೇಶ ಬೆಲ್ಲದ, ಪಪಂ ಮುಖ್ಯಾಧಿಕಾರಿ ಎನ್.ವಿ.ಭ್ರುಡಿಡಿಡಿಂಗಿಮಠ, ಐ.ಎ.ಕಾಕೋಳ, ಶಂಕರ ಕಾಮ ಗೌಡರ, ಮಹಾದೇವ ಜೀವಣಿ, ಮಹಾಲಿಂಗ ಹಂಜಿ, ಲಕ್ಷ್ಮಣ ಪೂಜಾರಿ, ಮುರಗೆಪ್ಪ ಅಡಿಸೇರಿ ಇದ್ದರು. ನಂತರ ಶಾಸಕ ಐಹೊಳೆ ಅವರು ಕಬ್ಬೂರ ಪಪಂಗೆ 10 ಲಕ್ಷ ರೂ. ಅನುದಾನದಲ್ಲಿ ಮಂಜೂರಾದ ಸಕ್ಕಿಂಗ್ ಯಂತ್ರಕ್ಕೆ ಚಾಲನೆ ನೀಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಮೊದಲನೇ ರ‌್ಯಾಂಕ್ ಪಡೆದ ಸಹನಾ ಕಾಮಗೌಡರನ್ನು ಗಣ್ಯರು ಸನ್ಮಾನಿಸಿದರು.