ಜಿಲ್ಲೆ

ನೀರಾವರಿ ಯೋಜನೆ ತ್ವರಿತ ಅನುಷ್ಠಾನಗೊಳ್ಳಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ಮುನವಳ್ಳಿ: ಕೃಷಿಗೆ ಅನುಕೂಲವಾಗುವ ನೀರಾವರಿ ಯೋಜನೆ ತ್ವರಿತವಾಗಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಸೋಮಶೇಖರಮಠದ ಮುರುಂದ್ರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಸೋಮಶೇಖರಮಠದ ಸಭಾಭವನದಲ್ಲಿ ಕಳಸಾ ಬಂಡೂರಿ ನಾಲಾ ಜೋಡಣಾ ಹೋರಾಟ ಸಮಿತಿ ಹಾಗೂ ರೈತರ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 45ನೇ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮುಖಂಡರಾದ ಪಂಚನಗೌಡ ದ್ಯಾಮನಗೌಡರ, ಅಂಬರೀಷ ಯಲಿಗಾರ, ಉಮೇಶ ಬಾಳಿ, ಶಿವಾನಂದ ಮೇಟಿ, ಜಗದೀಶ ಹಿರೇಮಠ ಮಾತನಾಡಿದರು.

ಪುರಸಭೆ ಅಧ್ಯ ಸಿ.ಬಿ.ಬಾಳಿ, ಎಂ.ಕೆ.ಹಿರೇಮಠ, ಗಿರಿಪ್ಪ ಹಂಜಿ, ಅರುಣಗೌಡ ಪಾಟೀಲ, ನಾಗಪ್ಪ ಕಾಮಣ್ಣವರ, ಕಲ್ಲಪ್ಪ ನಲವಡೆ, ಶಿವಪುತ್ರ ಕೆಳಗಡೆ, ಕಲ್ಲನಗೌಡ ಬಿಕ್ಕನಗೌಡ್ರ, ಈರಣ್ಣ ಬಸಲಿಗುಂದಿ, ರಾಮನಗೌಡ ಗೀದಿಗೌಡ್ರ, ಮಲ್ಲಿಕಾರ್ಜುನ ಗೋಕಾಕ, ಮಹಾಂತೇಶ ಕುರಬಗಟ್ಟಿ, ರವಿ ದ್ಯಾಮನಗೌಡರ, ಬಾಳು ಹೊಸಮನಿ, ಪ್ರಕಾಶ ಕಾಮಣ್ಣವರ, ಲೀಲಾವತಿ ಪಾಟೀಲ ಇತರರಿದ್ದರು.