ಜಿಲ್ಲೆ

ನೀರಾವರಿ ಮಾಹಿತಿ ನೀಡಲು ಮನವಿ

ಪ್ರಶಾಂತ ಹೂಗಾರ

ತೆಲಸಂಗ: ಕಾಮಗಾರಿ ಆರಂಭಗೊಂಡಿರುವ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯಿಂದ ಗ್ರಾಮದ ಕೆಲ ಜಮೀನುಗಳು ವಂಚಿತವಾಗುತ್ತಿವೆ. ಕಾರಣ ಗ್ರಾಮಸಭೆ ಕರೆದು ಎಷ್ಟು ಜಮೀನುಗಳಿಗೆ ಯೋಜನೆ ಪ್ರಯೋಜನವಾಗುತ್ತಿದೆ ಎಂಬ ಮಾಹಿತಿ ತಿಳಿಸಬೇಕು ಎಂದು ಸ್ಥಳೀಯ ರೈತ ಸಂಘದಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರವೀಂದ್ರ ಹಿರೇಮಠಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಇಡೀ ಗ್ರಾಮಕ್ಕೆ ಕೇವಲ ಒಂದು ಮೇನ್‌ಲೈನ್ ಹಾಯ್ದು ಹೋಗುತ್ತಿದ್ದು, ಎಲ್ಲ ಜಮೀನುಗಳಿಗೆ ಹೇಗೆ ಸಬ್‌ಲೈನ್‌ಗಳ ಕನೆಕ್ಷನ್ ತಲುಪುತ್ತದೆ ಎಂಬುದನ್ನು ಗ್ರಾಮಸ್ಥರಿಗೆ ತಿಳಿಸಿ ಗೊಂದಲ ಪರಿಹರಿಸಬೇಕೆಂದು ಒತ್ತಾಯಿಸಲಾಗಿದೆ. ರೈತ ಸಂಘದ ಅಧ್ಯಕ್ಷ ಸುಭಾಷ ಖೊಬ್ರಿ, ಮಕಬುಲ ಮುಲ್ಲಾ, ಸಿದ್ದಪ್ಪ ನಡೋಣಿ, ಇಲ್ಲಾಯಿ ಮುಜಾವರ್, ಅಶೋಕ ಶಿಂಧೆ ಇತರರಿದ್ದರು.