ರಾಣೆಬೆನ್ನೂರ: ಕಬ್ಬಿಣದ ಪೌಡರ್ ಕೊಡುವುದಾಗಿ ಹೇಳಿ ಲಕ್ಷಾಂತರ ರೂ. ವಂಚಿಸಿರುವ ಕುರಿತು ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನಿವಾಸಿ ಅಲ್ತಾಫ್ ಹುಸೇನ ಮಹಬೂಬ (34) ವಂಚಿರುವ ಆರೋಪಿ.
ಈತನ ವಿರುದ್ಧ ಇಲ್ಲಿಯ ಈಶ್ವರ ನಗರದ ಕಾಂತೇಶ ಕೃಷ್ಣಮೂತಿರ್ ರಾಣೆಬೆನ್ನೂರ (44) ಎಂಬುವರು ದೂರು ನೀಡಿದ್ದಾರೆ. ಆರೋಪಿಯು ಕಬ್ಬಿಣದ ಪೌಡರ್ ಕಳುಹಿಸಿಕೊಡುವುದಾಗಿ ಹೇಳಿ 1.14 ಕೋಟಿ ರೂ. ಪಡೆದುಕೊಂಡಿದ್ದಾನೆ. ಅದರಲ್ಲಿ 8.19 ಲಕ್ಷ ರೂ. ಬಾಕಿ ಕೊಡುವುದಿದ್ದು ಇಂದು-ನಾಳೆ ಎಂದು ಸತಾಯಿಸುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.