ನರಗುಂದ: ಹರಿದು ಹಂಚಿಹೋಗಿದ್ದ ನಾಡನ್ನು ಒಂದುಗೂಡಿಸುವಲ್ಲಿ ಸರ್. ಸಿದ್ದಪ್ಪ ಕಂಬಳಿ ಅಪಾರ ಶ್ರಮವಹಿಸಿದ್ದರು. ಅವರ ತ್ಯಾಗ ಮನೋಭಾವ ಎಂದಿಗೂ ಅಜರಾಮರವಾಗಿದೆ. ಇಂಥ ಪುಣ್ಯ ಪುರುಷರು ಜನಿಸಿದ ಈ ನಾಡು ಸಂಸ್ಕಾರ ಸಂಗಮದ ನೆಲೆಬೀಡಾಗಿದೆ ಎಂದು ಉಪನ್ಯಾಸಕ ಎಸ್.ಎಸ್. ಪೂಜಾರ ಹೇಳಿದರು.
ಪಟ್ಟಣದ ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಪ್ರಥಮ ದರ್ಜೆ ಕಲಾ, ವಾಣಿಜ್ಯ ಮಹಾವಿದ್ಯಾಲಯ, ಎನ್ನೆಸ್ಸೆಸ್ ಘಟಕ, ಕಸಾಪ ತಾಲೂಕು ಘಟಕದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಕರ್ನಾಟಕ ಏಕೀಕರಣ ಹೋರಾಟಗಾರರ ಯಶೋಗಾಥೆ’ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್. ಸಿದ್ದಪ್ಪ ಕಂಬಳಿ ಯುವಕರ ಭವಿಷ್ಯಕ್ಕೆ ಭರವಸೆಯ ವ್ಯಕ್ತಿಯಾಗಿದ್ದರು. ಅವರ ಬದುಕು ಇಡೀ ಸಮಾಜಕ್ಕೆ ಮಾದರಿಯಾದುದಾಗಿದೆ ಎಂದರು.
ಕಾಲೇಜ್ ಪ್ರಾಚಾರ್ಯ ಆರ್.ಬಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಏಕೀಕರಣಕ್ಕಾಗಿ ಹಲವಾರು ಹೋರಾಟ, ಸತ್ಯಾಗ್ರಹಗಳನ್ನು ನಡೆಸಿದ್ದಾರೆ. ಏಕೀಕರಣವಾದ ಕರ್ನಾಟಕವು ಸಮೃದ್ಧ ನೆಲೆಯ ಮೇಲೆ ನಿಲ್ಲಬೇಕಿದೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಪ್ರೋ.ಬಿ.ಸಿ. ಹನುಮಂತಗೌಡ್ರ ಹಾಗೂ ನಿವೃತ್ತ ಉಪನ್ಯಾಸಕ ಎಸ್.ಬಿ. ಭಜಂತ್ರಿ ಮಾತನಾಡಿದರು. ಬಿ.ಆರ್. ಮಹದೇವಪ್ಪನವರ, ನೀಲಕಂಠ ಮಡಿವಾಳರ, ಆರ್.ಕೆ. ಐನಾಪೂರ, ಎಸ್.ಆರ್. ಮೇಟಿ, ಎಂ.ಪಿ. ಕ್ಯಾತನಗೌಡ್ರ, ಇತರರು ಉಪಸ್ಥಿತರಿದ್ದರು. ಸಾವಕ್ಕ ಬಾರಕೇರ, ಮಂಜುನಾಥ ಪಾಟೀಲ ಹಾಗೂ ಮಹಾಬಳೇಶ್ವರ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು.