ಜಿಲ್ಲೆ

ಮುಸ್ಲಿಂ ಜಸ್ಟಿಸ್ ಫೋರಂಗೆ ಇಕ್ಬಾಲ್ ಅಧ್ಯಕ್ಷ

ಉಳ್ಳಾಲ: ಮುಸ್ಲಿಂ ಜಸ್ಟೀಸ್ ಫೋರಂ ಕರ್ನಾಟಕದ ಅಧ್ಯಕ್ಷರಾಗಿ ಇಕ್ಬಾಲ್ ಸಾಮಣಿಗೆ ಆಯ್ಕೆಯಾಗಿದ್ದಾರೆ. ಫೋರಂನ ವಾರ್ಷಿಕ ಸಭೆ ಫಳ್ನೀರ್‌ನಲ್ಲಿ ವಾಜಿ ಅಧ್ಯಕ್ಷ ಇರ್ಷಾದ್ ಯು.ಟಿ. ಅಧ್ಯಕ್ಷತೆಯಲ್ಲಿ ಜರಗಿತು. ಗೌಪ್ಯ ಮತದಾನದ ಮೂಲಕ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನು ಆಯ್ಕೆ ವಾಡಲಾಯಿತು.

ಮುಂದಿನ ಎರಡು ವರ್ಷಗಳ ಅವಧಿಗೆ (2024-2026) ಅಧ್ಯಕ್ಷರಾಗಿ ಇಕ್ಬಾಲ್ ಸಾಮಣಿಗೆ, ಉಪಾಧ್ಯಕ್ಷರಾಗಿ ಮುಸ್ತಫಾ ಹರೇಕಳ ಮತ್ತು ಇದ್ದಿ ಕುನ್ನಿ, ಪ್ರಧಾನ ಕಾರ್ಯದರ್ಶಿಯಾಗಿ ವಹಾಬ್ ಕುದ್ರೋಳಿ, ಕಾರ್ಯದರ್ಶಿಯಾಗಿ ನವಾಝ್ ಉಳ್ಳಾಲ್, ಕೋಶಾಧಿಕಾರಿಯಾಗಿ ಸಲಾಂ ಉಚ್ಚಿಲ್ ಮತ್ತು ಕಾರ್ಯಕಾರಿ ಸಮಿತಿಗೆ 9 ಸದಸ್ಯರು ಆಯ್ಕೆಯಾದರು.
ಸ್ಥಾಪಕಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ ಹಾಗೂ ವಕ್ತಾರ ಹನೀಫ್ ಖಾನ್ ಕೊಡಾಜೆ ಚುನಾವಣಾ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು.