ಸಿಂಧನೂರು: ನಗರದ ಹೊರವಲಯದಲ್ಲಿರುವ ಐಕ್ಯೂ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಇತ್ತೀಚೆಗೆ ಬಳ್ಳಾರಿಯ ಬಸವರಾಜೇಶ್ವರಿ ಶಾಲೆಯಲ್ಲಿ 2025-26ನೇ ಸಾಲಿನ ಕರ್ನಾಟಕ ಹಾಗೂ ಗೋವಾ ಜೋನಲ್ ಲೆವೆಲ್ ಗುಂಪು ಆಟದ ಥ್ರೋಬಾಲ್, ವಾಲಿಬಾಲ್, ಖೋ ಖೋ, ಕರಾಟೆ ಚೆಸ್ ಸ್ಪರ್ಧೆ ನಡೆದವು. ಅಂಡರ್ 17 ವಿಭಾಗದ ಖೋ ಖೋ, ವಾಲಿಬಾಲ್, ಕಬಡ್ಡಿ ಸ್ಪರ್ಧೆಯಲ್ಲಿ ಬಾಲಕರ ತಂಡ ಪ್ರಥಮ ಸ್ಥಾನ, ಅಂಡರ್ 14 ವಿಭಾಗದ ಕಬಡ್ಡಿ ಯಲ್ಲಿ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿದ್ದಾರೆ.