ಜಿಲ್ಲೆ

ಐಒವಿ ಸಂಸ್ಥಾಪನ ದಿನಾಚರಣೆ

Dharwada - Basavaraj Idli

ಹುಬ್ಬಳ್ಳಿ: ಇನ್ ಸ್ಟಿಟ್ಯೂಟ್ ಆಫ್ ವ್ಯಾಲ್ಯುವರ್ಸ್ (ಐಒವಿ) ಹುಬ್ಬಳ್ಳಿ ಶಾಖೆಯ ಸಂಸ್ಥಾಪನ ದಿನಾಚರಣೆ ಹಾಗೂ ಪದಗ್ರಹಣ ಸಮಾರಂಭ, ವಿಚಾರ ಸಂಕಿರಣ ಮೇ 24ರಂದು ಬೆಳಗ್ಗೆ 10ಕ್ಕೆ ದೇಶಪಾಂಡೆನಗರದ ಕರ್ನಾಟಕ ಜಿಮಖಾನಾ ಕ್ಲಬ್ ನಲ್ಲಿ ಏರ್ಪಡಿಸಲಾಗಿದೆ.

ಬ್ಯಾಂಕ್ ಆಫ್ ಇಂಡಿಯಾ ವಲಯ ವ್ಯವಸ್ಥಾಪಕ ತರಿಣಿ ಚರಣ ಸಾಹು ಅತಿಥಿಗಳಾಗಿ ಪಾಲ್ಗೊಳ್ಳುವರು. ಎ.ಆರ್. ಛಬ್ಬಿ ಅಧ್ಯಕ್ಷತೆ ವಹಿಸುವರು. ದೆಹಲಿಯ ಐಒವಿ ಕೋಆರ್ಡಿನೇಟರ್, ಕೌನ್ಸಿಲ್ ಸದಸ್ಯ ಜಿ.ಎಸ್. ಅಂಗಡಿ ನಿರ್ವಹಣೆ ಮಾಡುವರು.

ಶಾಖೆಯ ಚೇರ್ಮನ್ ಎಚ್.ಎಂ. ಕುಮಾರ, ಉಪಾಧ್ಯಕ್ಷರಾದ ಎಂ.ಎಂ. ಜಲವಾದಿ, ಎಸ್.ಎಸ್. ಹಿರೇಮಠ, ಗೌರವ ಖಜಾಂಚಿ ಎಂ.ಎಫ್. ಜುಂಜಣ್ಣವರ, ಗೌರವ ಕಾರ್ಯದರ್ಶಿ ರಾಜು ಕೆ. ಗೌಡ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.